Saturday, July 12, 2025

Latest Posts

Whale : ಕುಂದಾಪುರ :ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ವಂಚನೆ

- Advertisement -

Kundapur News: ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ಸಾರ್ವಜನಿಕರ ವಂಚಿಸಲು ಯತ್ನಿಸುತ್ನಿಸಿದ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಿರಂಜನ್ ಎಸ್ (26), ಮಿಲನ್ ಮೊನಿಶ್ ಶೆಟ್ಟಿ (27), ಪ್ರಥ್ವಿ ಡಾಮ್ನಿಕ್ (31) ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರು ಬೈಂದೂರು ಯಡ್ತರೆ ಗ್ರಾಮ ಹೊಸ ಬಸ್ ನಿಲ್ದಾಣದಲ್ಲಿ ಹಳದಿ ಬಣ್ಣದ ಮೇಣದಂತಹ ವಸ್ತು ತೋರಿಸಿ ತಿಮಿಂಗಲದ ಅಂಬರ್ ಗ್ರೀಸ್ ಎಂದು ಹೇಳಿ  10 ಲಕ್ಷ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದರು.

ಬಂಧಿತರಿಂದ 3 ಕೆಜಿ 910 ಗ್ರಾಂ ತೂಕದ ತಿಮಿಂಗಿಲದ ಅಂಬರ್ ಗ್ರಿಸ್ ನಂತಿರುವ ವಸ್ತು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇಣದಂತಹ ವಸ್ತುವಿಗೆ ತಿಮಿಂಗಿಲದ ಅಂಬರ್ ಗ್ರಿಸ್ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಸಕ್ರೀಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮತ್ತು ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದ್ದು, ಬೈಂದೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Priyank Kharge : ರಾಜ್ಯ ಪಂಚಾಯತಿ ನೌಕರರ ಸಂಘದ ಪ್ರತಿನಿಧಿಗಳ ಜೊತೆ ಖರ್ಗೆ ಮಾತುಕತೆ

D.K.Shivakumar : ದೇಶಕ್ಕೆ ಕರ್ನಾಟಕ ರಾಜ್ಯದಿಂದ ಒಂದು ದೊಡ್ಡ ಸಂದೇಶ ಸಾರಬೇಕು : ಡಿಕೆಶಿ

Police-ಡೆಂಗ್ಯೂ ಜ್ವರದಿಂದ ಪೊಲೀಸ್ ಪೇದೆ ನಿಧನ

- Advertisement -

Latest Posts

Don't Miss