Hassan News: ಹಾಸನದಲ್ಲಿ ಚಿರತೆಯೊಂದು ದನದ ಕೊಟ್ಟಿಗೆಯಲ್ಲಿ ಸಿಲುಕಿದ ಘಟನೆ ನಡೆದಿದೆ. ಆಹಾರ ಅರಸಿ ಬಂದ ಚಿರತೆ ಇದೀಗ ಕೊಟ್ಟಿಗೆಯಲ್ಲಿ ಬಂಧಿಯಾಗಿವೆ.
ಹಾಸನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರ ಮನೆಗೆ ನುಗ್ಗಿದ ಚಿರತೆಯೊಂದು ಪಕ್ಕಕ್ಕೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಸಿಲುಕಿಕೊಂಡಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಬಂದ ಚಿರತೆ ಸಿಕ್ಕಿಹಾಕಿಕೊಂಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಹಾಗೆಯೇ ಸ್ಥಳಕ್ಕೆ ಊರವರು ಬಂದು ಕಾವಲು ಕಾಯುತ್ತಿದ್ದಾರೆ. ಇನ್ನು ಚಿರತೆ ಬೋನ್ ಕೂಡಾ ಸಿದ್ಧವಾಗಿದ್ದು ಇದೀಗ ಚಿರತೆಯ ಬಂಧನಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಕೊಟ್ಟಿಗೆಯಲ್ಲಿರುವ 2 ದನಗಳನ್ನು ರಕ್ಷಣೆ ಮಾಡಲಾಗಿದ್ದು, ಮತ್ತೆ ಒಂದು ಕರು ಹಾಗು ದನ ಕೊಟ್ಟಿಗೆಯಲ್ಲಿಯೇ ಉಳಿದಿವೆ ಎಂಬ ಮಾಹಿತಿ ಇದೆ.
Shravana belagola-ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದೆ ಸಾಹಸಿ..! ಎಷ್ಟು ಕೆಜಿ ಭಾರ ಗೊತ್ತಾ?
Pramod Muthalik – ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ
Free checkup-ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಿಂದ ಪತ್ರಕರ್ತರಿಗೆ ಆರೋಗ್ಯ ತಪಾಸಣೆ