- Advertisement -
ಕಾರ್ಕಳ : ಕಳೆದ ಕೆಲವು ದಿನಗಳಿಂದ ರಾಜ್ಯದ ನಾನಾ ಕಡೆ ಭಾರಿ ಪ್ರಮಾಣದ ಮಳೆಯಾಗಿದ್ದು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಗಾಳಿ ಸಹಿತ ಹೆಚ್ಚಿನ ಮಳೆಯ ತೇವಾಂಶದಿಂದಾಗಿ ಗುಡ್ಡಗಾಡು ಪ್ರದೇಶಗಳು ಕುಸಿಯುತ್ತಿವೆ.
ಬುಧವಾರ ಸುರಿದ ಗಾಳಿ ಮಳೆಗೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ನಿವಾಸಿ ಸುಮಿತ್ರಾ ರವರ ವಾಸದ ಮನೆಯ ಭಾಗಶಃ ಹಾನಿಯಾದ ಘಟನೆ ನಡೆದಿದೆ. ಅಂದಾಜು ಸುಮಾರು 40 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೀಗೆಯೆ ಕರಾವಳಿ ಪ್ರದೇಶಗಳಲ್ಲಿ ಜಾಸ್ತಿ ಮಳೆಯಾದ ಕಾರಣ ಊರುಗಳಲ್ಲಿ ನೀರು ಹರಿದು ಮನೆಗಳಿಗೆ ನೀರು ನುಗ್ಗಿ ಜನರಿಗೆ ವಾಸಮಾಡಲು ತೊಂದರೆಯಾಗಿದೆ.ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಪರಿಶಿಲನೆ ನಡೆಸಿ ಜನರ ಸಂಕಷ್ಟಕ್ಕೆ ನೆರವಾಗುತಿದ್ದಾರೆ.
- Advertisement -