Banglore News: ಬೆಂಗಳೂರು ಹೈವೇ ಯಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ದರೋಡೆ ನಡೆದಿರುವುದು ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದೆ. ಚಿನ್ನದ ವ್ಯಾಪಾರಿ ತಮ್ಮ ಸ್ಕೂಟರ್‌ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್‌ನಲ್ಲೇ ಹೋಗುತ್ತಿದ್ದರು. ಈ ವೇಳೆ ಮತ್ತೊಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್ ಮೇಲೆ ಚಲಿಸುತಿದ್ದ ಬೈಕ್‌ಗೆ ಅಡ್ಡ ಬಂದು ಬೈಕ್ ಸ್ಲೋ ಮಾಡಿಸಿದ್ದಾರೆ.
ನಂತರ ನೇರವಾಗಿ ಸ್ಕೂಟರ್‌ನಲ್ಲಿ ಚಿನ್ನ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.ದರೋಡೆಗೊಳಗಾದ ವ್ಯಾಪಾರಿ ಕಾಟನ್‌ಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಇಲ್ಲ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಈ ದರೋಡೆ ನಡೆದಿರುವುದು ಬೆಂಗಳೂರಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. 3 ಕೆಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ.
Rain effect- ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಿತ್ತು ಬಂದ ವಿದ್ಯುತ್ ಕಂಬ
Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!