Sunday, December 22, 2024

Latest Posts

D.K.Shivakumar :ನಿವಾಸಿ ಕ್ಷೇಮಾಭಿವೃದ್ಧಿ ,ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಡಿಕೆಶಿ ಸಮಾಲೋಚನೆ

- Advertisement -

Banglore News: ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಡಿಸಿಎಂ ಡಿಕೆಶಿ ಸಂವಾದ ನಡೆಸಿದರು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ನಾಗರಿಕರೇ ಧ್ವನಿ. ಅವರ ಸಹಕಾರ ಹಾಗೂ ಬೆಂಬಲದ ಮೂಲಕ ಬೆಂಗಳೂರಿನ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಕಾರಾತ್ಮಕವಾಗಿರುವ ಸಂಗ್ರಹಿತ ಸಲಹೆಗಳನ್ನು ಪರಿಷ್ಕರಿಸಿ ಪರಿಗಣಿಸಲು ಉನ್ನತ ಸಮಿತಿಯೊಂದನ್ನು ರೂಪಿಸಲಾಗಿದೆ. ಈಗ ಕೆಲವರ ಸಲಹೆಗಳನ್ನಷ್ಟೇ ಪರಿಗಣಿಸದೆ ಪ್ರತಿಯೊಬ್ಬರ ಸಲಹೆಗಳಿಗೂ ಆದ್ಯತೆ ನೀಡಲಾಗುತ್ತದೆ.

ಬೆಂಗಳೂರಿನ ಸಂಚಾರ ನಿರ್ವಹಣೆ, ಮೂಲಸೌಲಭ್ಯ, ಮಳೆ ನೀರು ಸರಾಗವಾಗಿ ಹರಿಯುವಿಕೆ, ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ಏಳು ಅಂಶಗಳ ಮೇಲೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು, ಬೆಂಗಳೂರಿನ ನಾಗರಿಕರು, ತಜ್ಞರು, ಪರಿಣಿತರು ಹಾಗೂ ಆಸಕ್ತರು https://t.co/XpID37zRcS ವೆಬ್‌ಸೈಟ್‌ಗೆ ಲಾಗಿನ್‌ ಆಗಿ ನಿಮ್ಮ ಸಲಹೆಗಳನ್ನು ನಮಗೆ ಕಳಿಸಬಹುದು ಎಂಬುವುದಾಗಿ ಹೇಳಿದರು.

ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಹೈವೇಯಲ್ಲಿನ  ದರೋಡೆ…!

Petrol : ಬೆಳ್ವೆ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನಕ್ಕೆ ಯತ್ನ

Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!

- Advertisement -

Latest Posts

Don't Miss