Monday, December 23, 2024

Latest Posts

viral video: ಯುವಕನ ಬೆತ್ತಲೆ ಪ್ರಕರಣ: ಬಂಧಿತರ ಸಂಖ್ಯೆ 10 ಕ್ಕೆ ಏರಿಕೆ.

- Advertisement -

ಹುಬ್ಬಳ್ಳಿ:ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧನ ಮಾಡಿದ್ದು,ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಬಂಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ.‌ಈಗಾಗಲೇ ಹಲ್ಲೆ ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಮಂಜುಳಾ ಜಾಧವ ಇಬ್ಬರ ಮಕ್ಕಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ದಿನಕ್ಕೊಂದು ವಿಡಿಯೋ ಹೊರಬರುತ್ತಿದ್ದಂತೆ ಇತ್ತ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಸಂದೀಪ ಸಾಳುಂಕೆ ಎಂಬ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆಯನ್ನು ಮಾಡಲಾಗಿತ್ತು.ವಿಡಿಯೋ ವೈರಲ್ ಬೆನ್ನಲ್ಲೇ ಈವರೆಗೆ ಹಲ್ಲೆಯನ್ನು ಮಾಡಿದ ಏಳು ಜನ ಆರೋಪಿಗಳ ಬಂಧಿಸಿದ್ದು, ಮತ್ತೆ ಮೂವರ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ಬಂಧಿಸಲಾಗಿದೆ.

ಯಮನೂರು ಯರಕಲ್ಲ್, ಕಾರ್ತಿಕ ಜಬಲಾಪೂರ,ಪವನ ಇಂದರಗಿ ಬಂಧಿತ ಆರೋಪಿಗಳು. ಇನ್ನೂಳಿದವರಿಗಾಗಿ ಬೆಂಡಿಗೇರಿ ಪೊಲೀಸರು ಬಿಡುವಿಲ್ಲದೇ ಶೋಧ ಮುಂದುವರೆಸಿದ್ದು, ಹಲ್ಲೆಗೊಳಗಾದ ಸಂದೀಪ್ ಪೊಲೀಸರ ತನಿಖೆಗೆ ಸರಿಯಾಗಿ ಸಹಕರಿಸದ ಇರುವದು ತಲೆನೋವಾಗಿದೆ.

ಪ್ರೇಕ್ಷಕರ ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ

ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್ .

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು..?

- Advertisement -

Latest Posts

Don't Miss