ಚಿತ್ರದುರ್ಗ: ನಗರದಲ್ಲಿರುವ ನಜೀರ್ ಅಹ್ಮದ್ ಎನ್ನುವ ಉದ್ಯಮಿಯ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಪಿಸ್ತೂಲು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಜುಲೈ 8 ರಂದು ಮನೆ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಬೆಂಗಳೂರಿನ ದೇವಸಂದ್ರದ ಪ್ರಸನ್ನ, ಆರ್ ಟಿ ನಗರದ ಸಮ್ಮು ಆಲಿಯಾಸ್ ಬಷೀರ್ ಮತ್ತು ಬಿಹಾರ್ ಮೂಲದ ಮೊಹಮದ್ ಸಾಕೀಬ್ ಎನ್ನುವವರು ಜುಲೈ 8 ರಂದು ಉದ್ಯಮಿ ಮನೆಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರಗೆ ಮನೆಯಲ್ಲಿದ್ದ 7 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡು ,ಮಹಿಳೆಯರ ಮೇಲಿನ 12 ತೊಲೆ ಚಿನ್ನಾಭರಣಗಳನ್ನು ದೋಚಿ ಬಳಿಕ ಇಬ್ಬರನ್ನು ಅಪಹರಿಸಿ 50 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರೆಂದು ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಮ್ ಮಾಹಿತಿ ನೀಡಿದ್ದಾರೆ.
ಉದ್ಯಮಿ ನಜೀರ್ ಅಹ್ಮದ್ ನ ಪುತ್ರ ಸಮೀರ್ ಮತ್ತು ಅಳಿಯ ಷಹನಾಜ್ ನನ್ನು ಅಪಹರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಹಣ ಸುಲಿಗೆ ಮಾಡಿದ್ದಾರೆ. ಉದ್ಯಮಿ ನಜೀರ್ ದಾವಣಗೆರೆಯ ಸಂಬಂಧಿಕರ ಬಳಿ 25 ಲಕ್ಷ ಮತ್ತು ಚಿತ್ರದುರ್ಗದ ಕ್ಯಾದಿಗೇರ ಗ್ರಾಮದ ಸ್ನೇಹಿತನ ಬಳಿ 25 ಲಕ್ಷ ಹಣ ಪಡೆದು ದರೋಡೆಕೋರರಿಗೆ ಹಣ ನೀಡಿ ಮಗ ಮತ್ತುಅಳಿಯನನ್ನು ಬಿಡಿಸಿಕೊಂಡು ಬಂದಿದ್ದಾರೆ. ದಾವಣಗೆರೆಯ ಉದ್ಯಮಿ ಹಣ ನೀಡಿದವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಬಳಿಕ ಪೋಲಿಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ