National News: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇ ರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟಿಸಿದ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದರು.
ವಿರೋಧ ಪಕ್ಷಗಳು ವೈಯಕ್ತಿಕ ಲಾಭಗಳಲ್ಲಿ ಮಾತ್ರ ಆಸಕ್ತಿ ಹೊಂದಿವೆ. ಅವರ ಮಂತ್ರ ’ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ’ ತಮ್ಮಲ್ಲಿರುವ ಭ್ರಷ್ಟರನ್ನು ರಕ್ಷಿಸಲು ಪ್ರತಿಪಕ್ಷಗಳು ಒಂದಾಗುತ್ತವೆ’
“ಅಲ್ಲಿ ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇ ಳನ ನಡೆಯುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ಮೇಲೆ ಕಟುವಾದ ಟೀಕೆ ಮಾಡಿದರು. ‘ಕುಟುಂಬ ಮೊದಲು ರಾಷ್ಟ್ರಕ್ಕೆ ಏನಿಲ್ಲ’ ಎನ್ನುವುದು ಪ್ರತಿಪಕ್ಷಗಳ ಧ್ಯೇಯವಾಕ್ಯ ಎಂದು ಟಾಂಗ್ ನೀಡಿದರು.
9 ವರ್ಷಗಳಲ್ಲಿ ಹಳೆಯ ಸರ್ಕಾರ ಮಾಡಿರುವ ತಪ್ಪುಗಳನ್ನು ಸರಿಪಡಿಸಿದ್ದೇವೆ. ಅಲ್ಲದೇ ಜನರಿಗೆ ಹೊಸ ಸೌಲಭ್ಯಗಳು ಮತ್ತು ಮಾರ್ಗಗಳನ್ನು ಒದಗಿಸಿದ್ದೇವೆ. ಇಂದು, ಭಾರತ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾದರಿಯಾಗಿದೆ” ಎಂದು ನಮೋ ಸರಕಾರದ ಕಾರ್ಯಗಳನ್ನು ಬಣ್ಣಿಸಿದರು.
Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ

