State News: ಇಂದು ಸದನದಲ್ಲಿ ತುಳು ಭಾಷೆಯಲ್ಲಿ ಚರ್ಚೆ ನಡೆದಿರೋದು ಬಹಳಷ್ಟು ಸ್ವಾರಸ್ಯಕರವಾಗಿತ್ತು. ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಈ ಬಗ್ಗೆ ಅಶೋಕ್ ರೈ ತುಳುವಿನಲ್ಲಿಯೇ ಸ್ಪೀಕರ್ ಖಾದರ್ ಜೊತೆ ಮಾತನಾಡಿದ್ದಾರೆ.
ಈ ವೇಳೆ ಸ್ಪೀಕರ್ ಖಾದರ್ ಅಶೋಕ್ ರೈ ಅವರಿಗೆ ಕನ್ನಡದಲ್ಲಿಯೇ ಮಾತನಾಡಲು ಹೇಳಿದ್ದಾರೆ. ಒಂದು ಕ್ಷಣ ಸದನದಲ್ಲಿ ತುಳು ರಾರಾಜಿಸಿತ್ತು.
ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದ್ರು ಈ ವೇಳೆ ಸ್ಪೀಕರ್ ಯುಟಿ ಖಾದರ್ ತುಳು ಭಾಷೆಯಲ್ಲೇ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ ತುಳುವಿನಲ್ಲಿ ಮಾತನಾಡಲು ಮುಂದಾದಾಗ ಕನ್ನಡದಲ್ಲಿ ಮಾತನಾಡಿ ಎಂದು ಸ್ಪೀಕರ್ ಖಾದರ್ ಸೂಚನೆ ನೀಡಿದ್ರು.
ಉಳಿದ ಶಾಸಕರು ತುಳುವಿಗೆ ವಿರೋಧ ಅಲ್ಲ ಬದಲಾಗಿ ತುಳುವಿನಲ್ಲಿ ಮಾತನಾಡಿದರೆ ಎಲ್ಲರಿಗೂ ಅರ್ಥವಾಗುವುದಿಲ್ಲ ಮತ್ತು ಬರೆಯುವವರಿಗೆ ಕಷ್ಟವಾಗುತ್ತದೆ ಎಂದರು.
Tomato-ಇಷ್ಟುದಿನ ಮಾನವರು ಟೋಮಾಟೋ ಕಳ್ಳತನ ಮಾಡುತಿದ್ದರು, ಆದರೆ ಈಗ ಪ್ರಾಣಿಗಳು ಸಹ ಕಳ್ಳತನ ಮಾಡುತ್ತಿವೆ
Forest-ಅಕ್ರಮ ರೆಸಾರ್ಟ್ ಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು
corporator : ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಕಾಲ್ಕಿತ್ತ ಕಾರ್ಪೊರೇಟರ್…!