Political News:ವಿಧಾನಸೌಧದಲ್ಲಿ ಮಹಾಮೈತ್ರಿ ಕೂಟದ ಉಪಚಾರದ ಬಗ್ಗೆ ಮಬಹಳ ಸದ್ದು ಗದ್ದಲ ನಡೆದಿತ್ತು ಬಿಜೆಪಿ ನಾಯಕರು ಡೆಪ್ಯುಟಿ ಸ್ಪೀಕರ್ ಗೆ ಪ್ರಶ್ನೆಗಳ ಸುರಿಮಳೆಯೇ ಗರಿದರು. ತದ ನಂತರ ಅವರ ಪ್ರಶ್ನಾವಳಿ ಅತಿರೇಕವನ್ನು ಪಡೆದು ಅಸಭ್ಯ ವರ್ತನೆಗೂ ಗುರಿಯಾಯಿತು.
ಬಿಜೆಪಿ ನಾಯಕರು ಸದನದ ಬಾವಿಗಿಳಿದು ವಿಧೇಯಕ ಪತ್ರ ಹಾಗು ಬಿಲ್ ಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಸಾಕಿದ್ದರು. ಈ ಕಾರಣದಿಂದ ಬಿಜೆಪಿ ನಾಯಕರ 10 ಹೆಸರುಗಳನ್ನು ನಮೂದಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಕಾರಣದಿಂದ ಜುಲೈ 20 ಗುರುವಾರ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ನಿನರತರಾದರು. ಈ ವೇಳೆ ಆರ್ ಅಶೋಕ್ ಮಾತನಾಡಿ ವಿಧಾನ ಸೌಧದ ಒಳಗೆ ಪ್ರಜಾಪ್ರಭುತ್ವದ ಕೊಲೆ ನಡೆದಿದೆ.
ಸರಕಾರಕ್ಕೆ ಮಾನಮರ್ಯಾದೆ ಇದೆಯಾ ದುಂದುವೆಚ್ಚ ಮಾಡೋದಕ್ಕೆ ಸರ್ಕಾರ ಯೋಜನೆ ಮಾಡಿದೆ. ಸರಕಾರದ ಅತಿಧೋರಣೆಯನ್ನು ನಾವು ಪ್ರಶ್ನೆ ಮಾಡೋ ಅಧಿಕಾರ ಇಲ್ಲವಾ ಎಂಬುವುದಾಗಿ ಪ್ರಶ್ನೆ ಮಾಡಿದ್ದರು. ಜೊತೆಗೆ ಅನೇಕ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಯಲ್ಲಿ ನಿರತರಾದರು.
Vidhana Soudha : ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರಿಂದ ಪ್ರತಿಭಟನೆ
Siddaramaiah : ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅತ್ಯಂತ ಬೇಸರದ ದಿನ: ಸಿಎಂ ಸಿದ್ದರಾಮಯ್ಯ

