Monday, December 23, 2024

Latest Posts

Doctorate : ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದ ದಿನಕೂಲಿ ಮಹಿಳೆ…!

- Advertisement -

Ananthapura News : ಅನಂತಪುರ ಜಿಲ್ಲೆಯಲ್ಲಿ ಶಿಕ್ಷಣದ ಕುರಿತಾದ ಕಥೆ ದಾಖಲಾಗಿದೆ. ಭಾರತಿ ಈ ಜಿಲ್ಲೆಯ ಸಿಂಗನಮಲ ಮಂಡಲದ ನಾಗುಲಗುಡ್ಡಂ ಎಂಬ ದೂರದ ಗ್ರಾಮದಲ್ಲಿ ವಾಸವಿದ್ದಾರೆ.

ಬಾಲ್ಯದಿಂದಲೂ ಕಲಿಯುವ ಉತ್ಸಾಹದಲ್ಲಿದ್ದ ಭಾರತಿ ತನ್ನ 10ನೇ ತರಗತಿ ವಿದ್ಯಾಭ್ಯಾಸವನ್ನು ಶಿಂಗನಮಲ ಸರಕಾರಿ ಶಾಲೆ ಮತ್ತು ಇಂಟರ್ ಪಾಮಿಡಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದರು. ತಂದೆ-ತಾಯಿಗೆ ಮೂವರು ಹೆಣ್ಣುಮಕ್ಕಳಲ್ಲಿ ದೊಡ್ಡವಳು ಭಾರತಿ.  ಈ ಎಲ್ಲಾ ಜವಾಬ್ದಾರಿಗಳ ಹೊರೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ಅವಳು ತನ್ನ ಸಂಬಂಧಿ ಶಿವಪ್ರಸಾದ್‌ರನ್ನು ದ್ವಿತೀಯ ಪಿಯುಸಿ ಆದ ಬಳಿಕ ವಿವಾಹವಾಗಿದ್ದರು. ಭವಿಷ್ಯದ ಬಗ್ಗೆ ಎಷ್ಟೇ ಕನಸುಗಳನ್ನು ಕಂಡರೂ ಗಂಡನಿಗೆ ಅದನ್ನು ತಿಳಿಸಿರಲಿಲ್ಲ. ಆದರೆ, ಪತ್ನಿಯ ಆಸೆ ಗಂಡನಿಗೆ ತಿಳಿದಿತ್ತು. ವಿದ್ಯಾಭ್ಯಾಸ ಮುಂದುವರಿಸಲು ಶಿವಪ್ರಸಾದ್‌ ಪ್ರೋತ್ಸಾಹ ನೀಡಿದರು. ಭಾರತಿ ಅದರಂತೆ ಓದಲು ಆರಂಭಿಸಿದ್ದರು.

ಗಂಡನ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಇದರಿಂದಾಗಿ ಭಾರತಿ ತನ್ನ ಪದವಿ ಮತ್ತು ಪಿಜಿಯನ್ನು ಅನಂತಪುರ ಎಸ್‌ಎಸ್‌ಬಿಎನ್‌ನಲ್ಲಿ ಮುಗಿಸಿದರು. ಕೆಲವು ದಿನ ಕಾಲೇಜಿಗೆ ಹೋಗುತ್ತಿದ್ದ ಆಕೆ, ಕಾಲೇಜು ಇಲ್ಲದ ದಿನದಲ್ಲಿ ದಿನಗೂಲಿ ನೌಕರಳಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮಗಳಿನ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಲೇ ಅಧ್ಯಯನ ಮತ್ತು ಕೆಲಸವನ್ನು ಮಾಡುತ್ತಿದ್ದಳು. ಮಗಳ ಓದು-ಬರಹ ಮುಗಿದ ಬಳಿಕ ಪ್ರತಿದಿನ ರಾತ್ರಿ ಬೆಳಗಾಗುವವರೆಗೂ ಭಾರತಿ ಓದುತ್ತಿದ್ದಳು.

ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕದೊಂದಿಗೆ ಭಾರತಿ  ಪೂರೈಸಿದ್ದಳು. ಬಳಿಕ ಆಕೆಯ ಪತಿ ಹಾಗೂ ಪ್ರೊಫೆಸರ್‌ಗಳು ಪಿಎಚ್‌ಡಿಗೆ ಪ್ರಯತ್ನ ಮಾಡುವಂತೆ ಒತ್ತಾಯ ಮಾಡಿದ್ದರು. ಪ್ರೊಫೆಸರ್ ಡಾ.ಎಂ.ಸಿ.ಎಸ್.ಶುಭಾ ಅವರ ಬಳಿ ‘ಬೈನರಿ ಮಿಕ್ಸ್ಚರ್ಸ್’ ವಿಷಯದ ಬಗ್ಗೆ ಸಂಶೋಧನೆ ಮಾಡುವ ಅವಕಾಶ ಸಿಕ್ಕಿತು. ಇದಕ್ಕಾಗಿ ಪಡೆದ ಸ್ಟೈಫಂಡ್ ಸ್ವಲ್ಪ ಮಟ್ಟಿಗೆ ಭಾರತಿಗೆ ಸಹಾಯ ಮಾಡಿತು. ಆದರೂ ದಿನಗೂಲಿ ನಿಲ್ಲಿಸಲಿಲ್ಲ.ಅಂತೂ ಅಂದುಕೊಂಡಿದ್ದನ್ನು ಆಕೆ ಸಾಧಿಸಿಯೇ ಬಿಟ್ಟಿದ್ದಳು.

Ginger: ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಕಳ್ಳತನ

cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ

Grhalaxmi yojana : ಗೃಹಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್..! ಹಾಸನದಲ್ಲಿ ಸರ್ವರ್ ಡೌನ್..?!

- Advertisement -

Latest Posts

Don't Miss