Monday, December 23, 2024

Latest Posts

Hubli railway station: ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಜನತಾ ಖಾನಾ: ಎಸ್.ಡಬ್ಲ್ಯೂ. ಆರ್ ವಿನೂತನ ಕಾರ್ಯ

- Advertisement -

ಹುಬ್ಬಳ್ಳಿ: ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ಜೊತೆಗೆ ಸುರಕ್ಷಿತ ಪ್ರಯಾಣದ ಸೇವೆಯನ್ನು ಒದಗಿಸುತ್ತಿರುವ ನೈಋತ್ಯ ರೈಲ್ವೆ ಇಲಾಖೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಪ್ರಯಾಣಿಕರ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ನೀಡಲು ಮುಂದಾಗಿದೆ. ಹಾಗಿದ್ದರೇ ಹೇಗಿದೆ ಕಡಿಮೆ ದರದ ರೈಲ್ವೆ ಊಟ ಹಾಗೂ ಉಪಹಾರ ಅಂತೀರಾ ತೋರಿಸ್ತಿವಿ ನೋಡಿ..

ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಜೊತೆಗೆ ಸಾಕಷ್ಟು ಜನಪರ ಕಾರ್ಯವನ್ನು ಮಾಡಿರುವ ನೈಋತ್ಯ ರೈಲ್ವೆ ವಲಯ ಈಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ನೀಡಲು ಮುಂದಾಗಿದ್ದು, ಐ.ಆರ್.ಸಿ.ಟಿ.ಸಿ ಹಾಗೂ ಎಸ್.ಡಬ್ಲ್ಯೂ. ಆರ್ ಸಹಯೋಗದೊಂದಿಗೆ ರೈಲ್ವೆ ಪ್ಲಾಟ್ ಫಾರಂ ಮೇಲೆ ಜನತಾ ಖಾನಾ ಹಾಗೂ ಸ್ನ್ಯಾಕ್ ಮಿಲ್ಸ್ ಹೆಸರಲ್ಲಿ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು ಮುಂದಾಗಿದ್ದು, ಈಗಾಗಲೇ ಹುಬ್ಬಳ್ಳಿಯ ಸಿದ್ಧಾರೂಢರ ರೈಲ್ವೆ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಇನ್ನೂ ಕಡಿಮೆ ದರದಲ್ಲಿಯೇ ಗುಣಮಟ್ಟದ ಸಾರಿಗೆ ಸೇವೆ ನೀಡುತ್ತಿರುವ ರೈಲ್ವೆ ಪ್ರಯಾಣಿಕರಿಗೆ 20ರೂಪಾಯಿಯಲ್ಲಿ ಜನತಾ ಖಾನಾ, 50ರೂಪಾಯಿಯಲ್ಲಿ ಸ್ಕ್ಯಾಕ್ ಮಿಲ್ಸ್‌ ನೀಡುವ ಜೊತೆಗೆ ಪ್ರಯಾಣಿಕರ ಹಸಿವನ್ನು ನೀಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅನ್ ರೀಸರ್ವಡ್ ಪ್ಯಾಸೆಂಜರ್ ಗೆ ಈ ಯೋಜನೆ ಲಾಭ ದೊರೆಯಲಿದ್ದು,ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಎಸ್.ಡಬ್ಲೂ.ಆರ್ ವಲಯದ 51ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ಮೂಲಕ ವಿತರಣೆ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ರೈಲ್ವೆ ಇಲಾಖೆ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿರುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಚತೆಗೆ ಹಾಗೂ ಗುಣಮಟಕ್ಕೆ ನೈಋತ್ಯ ರೈಲ್ವೆ ಇಲಾಖೆ ಹಾಗೂ ಐ.ಆರ್.ಸಿ.ಟಿ.ಸಿ ಆದ್ಯತೆ ನೀಡಬೇಕಿದೆ.

Chocolate : ಮಾದಕ ವಸ್ತು ಮಿಶ್ರಿತ  ಚಾಕೊಲೇಟ್ ವಶಕ್ಕೆ….!

Holenarasipura:ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

Ginger: ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಕಳ್ಳತನ

- Advertisement -

Latest Posts

Don't Miss