ಸಿನಿಮಾ ಸುದ್ದಿ: ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದಲ್ಲಿ ಬಿಡ್ಡ ಹೆಸರಿನ ಕಳನಟನ ಪಾತ್ರ ನಿಮಗೆಲ್ಲ ನೆನಪಿರಬಹುದು ಅದೇ ರೀತಿ ಪೂಜಾರಿ ಸಿನಿಮಾ ಕೂಡಾ ನೆನಪಿರಬಹುದು ಆ ಸಿನಿಮಾಗಳಲ್ಲಿ ನಟಿಸಿದ ನಟ ಬೇರೆ ಯಾರು ಅಲ್ಲ ಅವರೇ ಆದಿ ಲೊಕೇಶ್ ಅವರು ಇಷ್ಟು ದಿನ ಬೆಳ್ಳಿ ಪರದೆಯಲ್ಲಿ ಅಬ್ಬರಿಸಿದ ಪೂಜಾರಿ ಈಗ ಕಿರು ಪರದೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ.
ಹೌದು ಪೂಜಾರಿ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ ನಂತರ ಅವರಿಗೆ ಬಂದಿರುವ ಪಾತ್ರಗಳೆಲ್ಲ ಕಳನಟನ ಪಾತ್ರಗಳೆ. ಅದೇ ರೀತಿ ಈಗ ಕನ್ನಡದ ಧಾರವಾಹಿಯಲ್ಲಿ ಕಳನಟನಾಗಿ ನಟಿಸಲು ಸಿದ್ದರಾಗಿದ್ದಾರೆ ಹಾಗಿದ್ದರೆ ಯಾವುದು ಆ ಧಾರವಾಹಿ ಅಂತೀರಾ ಅದೇ ಒಲವಿನ ‘ನಿಲ್ದಾಣ’ ಧಾರವಾಹಿಯಲ್ಲಿ. ಇಲ್ಲಿಯವರೇಗೂ ಆದಿಯವರ ಪಾತ್ರ ಇದೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ
ಒಲವಿನ ನಿಲ್ಧಾಣ ಧಾರವಾಹಿಯಲ್ಲಿ ಬರುವ ಸಾಚಿ ಎನ್ನುವ ಗೃಹಿಣಿಯ ಪಾತ್ರಕ್ಕೆ ಆದಿ ಲೋಕೇಶ್ ಪತಿಯಾಗಿ ನಟಿಸಲಿದ್ದಾರೆ. ಇನ್ನು ಈ ಧಾರವಾಹಿಯಲ್ಲಿ ಆದಿ ಕಳನಟನಾಗಿದ್ದು ಬಹಳ ಕ್ರೂರವಾಗಿರಲಿದೆಯಂತೆ ಇನ್ನು ಸಾಚಿ ಪಾತ್ರದ ಪತಿಯಾಗಿ ತೆರೆಯಲ್ಲಿ ಕಾಣಿಸಲಿರುವ ಕುರಿತು ಜುಲೈ 20 ರಂದು ಪ್ರೋಮೊ ರಿಲೀಸ್ ಮಾಡಿದೆ.