Political News : ವಿಪಕ್ಷನಾಯಕರು ಬಾವಿಗಿಳಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಲ್ ಹರಿದು ಹಾಕಿರುವುದರ ಪರಿಣಾಮ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿತ್ತು. ಆದರೆ ಬಿಜೆಪಿ ಶಾಸಕರೆಲ್ಲಾ ಸೇರಿ ವಿಧಾನ ಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು. ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದು ವಿಪರ್ಯಾಸ. ಸುಳ್ಳು ಹೇಳುವುದು, ಸಂಘರ್ಷ ಉಂಟು ಮಾಡುವುದು,ಸಮಾಜ ಒಡೆಯುವುದೇ ಬಿಜೆಪಿಯವರು ಮಾಡುವ ಕೆಲಸ ಎಂದು ಕಿಡಿ ಕಾರಿದ್ದಾರೆ.
ವಿರೋಧ ಪಕ್ಷದವರು ಇಲ್ಲದೆಯೇ ಉತ್ತರ ನೀಡುತ್ತಿದ್ದೇನೆ. ಇದು ಬಿಜೆಪಿ, ಜೆಡಿಎಸ್ನ ಜನವಿರೋಧಿ ನೀತಿ ಎಂದು ಗೊತ್ತಾಗುತ್ತೆ. ವಿಪಕ್ಷಗಳಿಗೆ ಟೀಕೆ ಮಾಡುವುದು, ಧರಣಿ ನಡೆಸುವ ಹಕ್ಕು ಇದೆ. ಸದನದ ಬಾವಿಗಿಳಿದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ಆದರೆ ಡೆಪ್ಯುಟಿ ಸ್ಪೀಕರ್ ವಿರುದ್ಧ ಅಮಾನುಷವಾಗಿ ನಡೆದುಕೊಂಡ್ರು. ಈ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದ್ದು ಎಂದು ಹೇಳಿದರು.
Congress: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಪಕ್ಷದಿಂದ ಉಚ್ಚಾಟನೆ ಮಾಡಬಹುದಾ?