Special News :ಪರಮಶ್ರೇಷ್ಠ ಸತಾನತನ ಧರ್ಮದ ಆಚಾರ ವಿಚಾರಗಳು ಒಂದು ವಿಶೇಷವಾದ ಸ್ಥಾನಮಾನ ವನ್ನು ಪಡೆದಿದೆ. ಸಾಮಾನ್ಯವಾಗಿ ಹಿಂದೂ ಸಂಸ್ಕೃತಿಯಲ್ಲಿಹೆಂಡತಿ ತನ್ನ ಗಂಡನ ಹೆಸರು ಹೇಳುವುದಿಲ್ಲ ಹೇಳಬಾರದು ಅನ್ನೋದು ಸಂಪ್ರದಾಯ ಬದಲಾಗಿ ರೀ ಎಂದು ಕರೆಯೋದೆ ಹೆಚ್ಚು ಆದ್ರೆ ಈ ರೀ ಪದದ ಹಿಂದೆ ಒಂದು ನಂಬಿಕೆ ಇದೆ . ಹಾಗಿದ್ರೆ ಏನು ಆ ನಂಬಿಕೆ ಯಾಕೆ ಪತಿಯ ಹೆಸರು ಹೇಳಬಾರದು ಎನ್ನುತ್ತಾರೆ ಹಿರಿಯರು….? ಇವೆಲ್ಲದಕ್ಕೂ ಇಲ್ಲಿದೆ ಉತ್ತರ….
ಸನಾತನ ಭಾರತೀಯ ಪದ್ಧತಿಯಲ್ಲಿ ಪತಿಯ ಹೆಸರನ್ನು ಪತ್ನಿಯಾದವಳು ಹೇಳುವುದಿಲ್ಲ. ಯಾಕೆ ಈ ಆಚರಣೆ ಎಂಬ ಪ್ರಶ್ನೆ ಇತ್ತೀಚಿಗಿನ ತಲೆಮಾರಿನಲ್ಲಿ ಸಹಜವಾಗಿ ಮೂಡುತ್ತಿದೆ. ನಮ್ಮಿಂದ ಹಿರಿಯರನ್ನು ಹೆಸರು ಹಿಡಿದು ಕರೆಯುವುದು ಉಚಿತವಲ್ಲ ಎಂದು ಶಾಸ್ತ್ರದಲ್ಲಿ ಹೇಳಿವೆ.
ಅದೇ ಪದ್ಧತಿಯಲ್ಲಿ ಪತ್ನಿಯಾದವಳು ಪತಿಯ ಹೆಸರನ್ನು ಹೇಳುವುದರಿಂದ ಪತಿಯ ಆಯುಷ್ಯ ಪ್ರಮಾಣ ಕಡಿಮೆ ಆಗುತ್ತದೆ ಎಂಬ ಉಲ್ಲೇಖವೂ ಇದೆ. ಈ ಕಾರಣಗಳಿಂದ ಧರ್ಮ ಶ್ರದ್ಧೆಯುಳ್ಳವರು ಪತಿಯ ಹೆಸರನ್ನು ಹೇಳುವುದಿಲ್ಲ. ಇದರ ಬದಲಾಗಿ ಹಿಂದಿನ ಕಾಲದಲ್ಲಿ “ಆರ್ಯಪುತ್ರ” “ಆರ್ಯ” “ಭೋಃ” ಎಂಬಿತ್ಯಾದಿ ಪದಗಳಿಂದ ಕರೆಯುವುದು ರೂಢಿಯಲ್ಲಿತ್ತು.
ಆದರೆ ಇತ್ತೀಚಿಗೆ ಪತ್ನಿಯಾದವಳು ತನ್ನ ಪತಿಯನ್ನು “ರೀ” ಎಂಬ ಪದದಿಂದ ಕರೆಯಲು ಆರಂಭಿಸಿದ್ದಾಳೆ. ಈ ರೀತಿಯ ಸಂಬೋಧನೆ ಆರಂಭ ಪ್ರಾಯಃ ನಾಟಕಗಳು , ಸಿನಿಮಾಗಳಿಂದ ಪ್ರೇರೇಪಿತ ಎಂಬುವುದಾಗಿ ಹೇಳಲಾಗುತ್ತಿದೆ.
ನಾವು ಪ್ರತೀ ದಿನ ಬಳಸುವ “ರೀ” ಎಂಬ ಶಬ್ದವು ಸಂಸ್ಕೃತದ “ರೇ” ಎಂಬ ಶಬ್ದದ ರೂಪವಾಗಿದೆ. ಸಂಸ್ಕ್ರತ ನಾಟಕಗಳಲ್ಲಿ “ರೇ” ಎಂಬ ಶಬ್ದವನ್ನು ಕೆಳಮಟ್ಟದ ಪಾತ್ರಗಳಿಗೆ ಮಾತ್ರ ಬಳಸಲಾಗಿದೆ. ವ್ಯಾಕರಣ ಶಾಸ್ತ್ರದಲ್ಲಿ ಹೇಳುವಂತೆ “ರೇ” ಎನ್ನುವ ಶಬ್ದವು “ನೀಚಾದೇಃ ಸಂಬೋಧನೆ” ಅಂದರೆ ರೇ ಎಂಬ ಶಬ್ದವು ನೀಚ ಪಾತ್ರಗಳಿಗೆ ಪದವಾಗಿದೆ. ಇಂತಹ ಪದವನ್ನು ಸನಾತನ ಭಾರತದ ಆಚರಣೆಗಳ ಮೇಲೆ ಶ್ರದ್ಧೆಯಿರುವ ನಾವುಗಳು ಸದಾ ಗೌರವಿಸುವ ಪತಿಯನ್ನು ಸಂಬೋಧಿಸಲು ಬಳಸುವುದು ಸರಿಯಲ್ಲ ಎಂಬುವುದಾಗಿ ಉಲ್ಲೇಖೀಸಿದೆ ಒಂದು ಗುಂಪು.
ಮತ್ತೊಂದು ಗುಂಪಿನ ಪ್ರಕಾರವಾಗಿ ರೀ ಎಂದರೆ ಅದು ಶ್ರೇಷ್ಠ ಎಂಬ ಅರ್ಥವನ್ನೂ ನೀಡುತ್ತೆ ಗಂಡನಾದವನು ಒಂದು ಕುಟುಂಬವನ್ನು ಕಟ್ಟಿ ಮುನ್ನಡೆಸುವವನು ಎಂಬ ಅರ್ಥ ನೀಡುತ್ತೆ ಆದ್ದರಿಂದ ಗಂಡನನ್ನು ರೀ ಎಂದು ಕರೆದರೆ ಶ್ರೇಯಸ್ಸು ಎಂಬುವುದಾಗಿ ಹೇಳುವುದುಂಟು….
ಒಟ್ಟಾರೆ ಸಂಪ್ರದಾಯದ ಪ್ರಕಾರವಾಗಿ ನಮಗಿಂತ ಹಿರಿಯರನ್ನು ಹೆಸರಿಡಿದು ಕರೆಯೋದು ಶ್ರೇಯಸ್ಸಲ್ಲ ಅನ್ನೋದೆ ಶಾಸ್ತ್ರ. ಆದ್ರೆ ಇದು ಕೆಲವೊಂದು ಬಾರಿ ಆಧುನಿಕ ಯುಗದಲ್ಲಿ ಅನ್ವಯಿಸೋದಿಲ್ಲ ಈಗಿನ ಪದ್ಧತಿ ಮಾಡರ್ನಿಟಿಗೆ ಜಗತ್ತೇ ಮಾರು ಹೋಗಿದೆ. ಈ ಕಾರಣದಿಂದ ಈಗ ಪತಿಯ ಹೆಸರನ್ನು ಕೆಲವರು ಸರಾಗವಾಗಿಯೇ ಹೇಳುತ್ತಾರೆ.
ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?