ಹೊಳೆನರಸೀಪುರ: ತಾಲ್ಲೂಕಿನ, ಎಸ್ ಅಂಕನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ನಿಯ ಮೇಲೆ ಪತಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿ ಚಂದ್ರಮೌಳಿ ಸ್ವತಃ ತಾನೇ ಬಂದು ಶರಣಾಗಿದ್ದಾನೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪಿಯ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ ಪತ್ನಿ ಅಂಬಿಕಾ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದರುಮೃತ ಅಂಬಿಕಾ ನಗರದ ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಅದೇ ಫ್ಯಾಕ್ಟರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿಗೆ ಪತ್ನಿ ಮತ್ತೊಬ್ಬರ ಜೊತೆ ಓಡಾಡುವುದು ಕಂಡು ಬಂದಿದೆ ಎಂದು ಸ್ವತಃ ಆರೋಪಿಯೇ ತಿಳಿಸಿದ್ದಾನೆ
ಪತ್ನಿಯ ಮೇಲೆ ಅಕ್ರಮ ಸಂಬಂಧದ ಆರೋಪದ ವಿಚಾರವಾಗಿ ಈ ಹಿಂದೆ ಅನೇಕ ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ದಂಪತಿ ಮೊನ್ನೆ ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿ, ಹಿರಿಯರ ಸಮ್ಮುಖದಲ್ಲಿ ಹೊಂದಾಣಿಕೆ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದು, ಮತ್ತೆ ಪತ್ನಿಯ ಮೇಲೆ ಅನುಮಾನ ವ್ಯಕ್ತ ಪಡಿಸಿರುವ ಆರೋಪಿ ಚಂದ್ರಮೌಳಿ ಕೋಪಗೊಂಡು ಅರಣ್ಯ ಪ್ರದೇಶದಲ್ಲಿ ಪತ್ನಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.ಮಾಡಿದ್ದಾನೆಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ ಎಂದರು
Husband Name : ಪತಿಯನ್ನು ಪತ್ನಿ ಹೆಸರಿಡಿದು ಕರೆಯಬಾರದು ಅಂತಾರೆ ಯಾಕೆ ಗೊತ್ತಾ..?!