ಬೆಂಗಳೂರು ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಾಗಿ ಮುಂದಿನ ದಿನಗಳಲ್ಲಿ ಹೊಟೆಲ್ ಗಳಲ್ಲಿನ ತಿಂಡಿ ಟೀ ಕಾಫಿ ಊಟದ ಬೆಲೆ ಜಾಸ್ತಿಯಾಗಲಿದೆ ಎಂಬ ಮಾಹಿತಿ ಬೆಂಗಳೂರು ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.
ಈ ಹಾಲಿನ ದರ ಏರಿಕೆಯ ಪರಿಣಾಮ ಹೊಟೆಲ್ ಗಳ ಮೇಲೂ ಬೀರಲಿದ್ದು ಆಗಸ್ಟ್ 1 ರಿಂದ ಹೊಸ ದರ ನಿಗದಿ ಮಾಡಲಿದೆ.ಎಲ್ಲಾ ತಿಂಡಿ ಮತ್ತು ಊಟ ಹಾಗೂ ಟೀ ಕಾಫಿಗಳ ದರದ ಮೇಲೆ 10 % ರಷ್ಟು ಹೆಚ್ಚಳ ನಿಗದಿಯಾಗಿದೆ , ಅದರೆ ,ಬೆಂಗಳೂರು ಹೊಟೆಲ್ ಮಾಲೀಕರ ಸಂಘದ ಸದಸ್ಯರು ಜುಲೈ 25 ರಂದು ಸಭೇ ಸೇರಿ ಕನಿಷ್ಟ 20 % ಬೆಲೆ ಜಾಸ್ತಿ ಮಾಡಲು ಸಿರ್ದರಿಸಲಿದ್ದೇವೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಮಾಹಿತಿ ತಿಳಿಸಿದ್ದಾರೆ.
ಇನ್ನು ಹಾಲಿನ ದರ ಮತ್ತು ಹೊಟೆಲ್ ನಲ್ಲಿನ ತಿಂಡಿಗಳ ಬೆಲೆ ಏರಿಕೆ ಪರಿಣಾಮ ಗ್ರಾಹಕರ ಮೇಲೆ ಇನ್ನು ಮುಂದೆ ತುಸು ಜಾಸ್ತಿನೇ ಬೀಳಲಿದೆ ಇನ್ನು ದರದ ವಿಚಾರಕ್ಕೆ ಬಂದರೆ ಕಾಫೀ 3 . ತಿಂಡಿ 5 ಮತ್ತು ಊಟದ ಮೇಲೆ 8 ರೂ ಜಾಸ್ತಿಯಾಗಬಹುದು
Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!
Rain news: ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ..! ಎಲ್ಲೆಲ್ಲಿ?