PHD: ಶುೃತಿ ಮರಾಠೆ ಇವರಿಗೆ ಪಿಎಚ್‍ಡಿ ಗೌರವ

ಶಿರ್ವ: ಎನ್‍ಐಟಿಕೆ ಸುರತ್ಕಲ್ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಸುನೈನಾ ಪಾಟೀಲ್ (ಶುೃತಿ ಶ್ರೀರಾಮ್ ಮರಾಠೆ) ಇವರು ಎನ್‍ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ಹರಿಪ್ರಸಾದ್ ದಾಸರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಸಿ ಆ್ಯಕ್ಸಿಡೀಕರಣ ಚಟುವಟಿಕೆ ಮತ್ತು ಅದರ ಚಲನಶಾಸ್ತ್ರಕ್ಕೆ ಸಿರಿಯ ಪ್ರಸಿಯೋಡೈಮಿಯಮ್ ವೇಗವರ್ಧಕದಲ್ಲಿ ಪರಿವರ್ತನೆಯ ಲೋಹದ ಡೊಪಾಂಟ್‍ಗಳ ಪರಿಣಾಮದ ಮೇಲೆ ಅಧ್ಯಯನ ವಿಷಯದ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಎನ್‍ಐಟಿಕೆ ಸುರತ್ಕಲ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಕೆಮಿಕಲ್ ಪ್ಲಾಂಟ್ ಡಿಸೈನ್ ಹಾಗೂ ಇಂಡಸ್ಟ್ರಿಯಲ್ ಪೊಲ್ಯೂಶನ್ ಕಂಟ್ರೋಲ್ ಎರಡೂ ವಿಷಯದಲ್ಲಿ ಎನ್‍ಐಟಿಕೆಯಲ್ಲಿ ಎಂ.ಟೆಕ್ ಪದವಿ ಗಳಿಸಿದ್ದಾರೆ.

ಇವರು ನಿಟ್ಟೆ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ಶ್ರೀರಾಮ್ ಪಿ.ಮರಾಠೆ ಬಂಟಕಲ್ಲು ಇವರ ಧರ್ಮಪತ್ನಿ ಹಾಗೂ ಕಲುಬುರ್ಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಶಿವಶರಣ ಪಾಟೀಲ್, ನಿರ್ಮಾಲಾ ದಂಪತಿಗಳ ಪುತ್ರಿ.

Rain news: ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ..! ಎಲ್ಲೆಲ್ಲಿ?

Hotel : ಹೊಟೇಲ್ ಗಳಲ್ಲಿ ಆಹಾರದ ಬೆಲೆ ಆಗಸ್ಟ್ ನಿಂದ ಜಾಸ್ತಿ ಮಾಡಲಿರುವ ಮಾಲೀಕರು

Eshwara Halli :ಹಾಸನದಲ್ಲಿ ಭೀಕರ ಅಪಘಾತ: ನಾಲ್ಕು ಸಾವು

About The Author