Subhramanya Rain : ಕುಕ್ಕೆ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಮುಳುಗಡೆ

Subhramanya News : ಸುಬ್ರಹ್ಮಣ್ಯ  ಪರಿಸರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯು ಶನಿವಾರ ದಿಂದ ಆದಿತ್ಯವಾರ ಬೆಳಗ್ಗೆ ತನಕ ಸುರಿದ ಬಾರೀ ಮಳೆಯ ಕಾರಣದಿಂದ ಕುಮಾರಧಾರ ನದಿಯು ಪ್ರವಾಹದಿಂದ ತುಂಬಿ ಹರಿಯುತ್ತಿದೆ.

ಇದರಿಂದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.ಲಗೇಜ್ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲವೂ ಮುಳುಗಡೆಯಾಗಿದೆ.

ಕುಮಾರಧಾರದ ಉಪನದಿ ದರ್ಪಣತೀರ್ಥವು ತುಂಬಿ ಹರಿದು ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ  ಪ್ರವಾಹದ ನೀರು ನುಗ್ಗಿತ್ತು.ಇದರಿಂದಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧವಾಗಿತ್ತು. ಕೃಷಿ ತೋಟಗಳಿಗೆ ನೀರು ನುಗ್ಗಿತ್ತು.

ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಸಿಲೆ,ಅಡ್ಡಹೊಳೆ,ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಕುಮಾರಧಾರಾ ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟ ಹೆಚ್ಚಿತ್ತು. ಈ ಕಾರಣದಿಂದಿ ನದಿ ಬದಿಗೆ ಹೋಗದಂತೆ ದೇವಾಲಯದಿಂದ  ಭಕ್ತರಿಗೆ ಸೂಚನೆ ನೀಡಲಾಗಿದೆ.

ಪೊಲೀಸರು, ಗೃಹರಕ್ಷಕ ದಳದಿಂದ ಸ್ನಾನ ಘಟ್ಟ ಬಳಿ ಕಾವಲು ಆಯೋಜಿಸಲಾಗಿದೆ.ಗೃಹರಕ್ಷಕ, ಎಸ್‌ಡಿಆರ್‌ಎಫ್ ತಂಡ ನಿಯೋಜನೆ ಮಾಡಲಾಗಿದೆ.

Dr.Preethi : ಮಂಗಳೂರು ಮೂಲದ ಯುವತಿಗೆ ಇಂಗ್ಲೇಂಡ್ ನಲ್ಲಿ ಕಾನೂನಿನಲ್ಲಿ ಪಿಹೆಚ್ ಡಿ ಪದವಿ

Ragging: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

ATM ಮಷಿನ್ ದೋಚಿದ ಕಳ್ಳರು.! ಕೋಲಾರದಲ್ಲಿ ಸಿನಿಮಾ ಸ್ಟೈಲ್ ರಾಬರಿ.!

About The Author