ಧಾರವಾಡ ..ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ನದಿ, ಕೆರೆ ಹಳ್ಳ ಕೋಡಿ ಮುಂತಾದ ಸ್ಥಳಗಳಲ್ಲಿ ನೀರು ತುಂಬಿಕೊಂಡು ಜನ ಜೀವನ ಅಸ್ತವ್ಯಸ್ಥವಾಗಿದೆ. ರಸ್ತೆ ಪಕ್ಕದಲ್ಲಿರುವ ಹಳ್ಳಗಳಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿವೆ.
ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಸ್ತೆಗಳು ನೀರಿನಲ್ಲಿ ನೆನೆದ ಕಾರಣ ಅಲ್ಲಲ್ಲಿ ತಗ್ಗು ಗುಂಡಿಗಳಾಗಿ ರಸ್ತೆ ಕುಸಿತ ಉಂಟಾಗಿ ವಾಹನ ಓಡಾಟಕ್ಕೆ ಅಡಚಣೆ ಉಂಟಾಗಿದೆ.ಅದೇ ರೀತಿ ದಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಮಲಕನಕೊಪ್ಪ ಗ್ರಾಮದ ರಸ್ತೆಯಲ್ಲಿ ಕಟ್ಟಿಗೆ ತುಂಬಿಕೊಂಡಿ ಹೊರಟಿದ್ದ ಲಾರಿಯೊಂದು ಕುಸಿದು ಬಿದ್ದ ರಸ್ತೆಯಲ್ಲಿ ಸಂಚರಿಸಿ ರಸ್ತೆಯ ಮದ್ಯೆ ಸಿಕ್ಕಿಹಾಕಿಕೊಂಡಿದೆ.
ಲಾರಿಯಲ್ಲಿ ಕಟ್ಟಿಗೆ ತುಂಬಿಕೊಂಡು ಕಲಘಟಗಿಯಿಂದ ಹಳಿಯಾಳ ಕಡೆ ಹೊರಟಿದ್ದ ಲಾರಿ ಮಲಕನಕೊಪ್ಪ ಬಳಿ ರಸ್ತೆಯ ಮದ್ಯೆ ಸಿಕ್ಕಿಹಾಕಿಕೊಂಡಿದೆ. ಲಾರಿಯನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಡುತ್ತಿದ್ದಾನೆ.
Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!
Subhramanya Rain : ಕುಕ್ಕೆ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಮುಳುಗಡೆ
Ragging: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

