- Advertisement -
ಮಂಡ್ಯ : ಕೊವೀಡ್ ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿಕಾರ್ಮಿಕರಿಗೆ ಸಮಸ್ಯೆಯಾಗ್ತಿದೆ.. ಈ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪುಣ್ಯಕೋಟಿ ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ಮಂಡ್ಯ ಡಿಸಿ. ಡಾ ವೆಂಕಟೇಶ್ ಚಾಲನೆ ನೀಡಿದ್ರು. ಈ ಕಾರ್ಯಕ್ರಮದ ಉದ್ದೇಶ ಕಡುಬಡವರು ಹಾಗೂ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಬಹುದಾಗಿದೆ. ನೀವು ಉಪಯೋಗಿಸಿದ ಚೆನ್ನಾಗಗಿರುವ ಬಟ್ಟೆ, ಬೆಡ್ ಶೀಟ್, ದಿನಸಿ ವಸ್ತುಗಳೂ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಕೊಡುವುದರ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗಬಹುದು.. ಮಂಡ್ಯ ನಗರದ ರೆಡ್ ಕ್ರಾಸ್ ಕಚೇರಿಗೆ ಬಂದು ವಸ್ತುಗಳನ್ನ ನೀಡಬಹುದು..
ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ
- Advertisement -