ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಜನರು ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದರೆ ಜನರ ಕಷ್ಟಗಳಿಗೆ ಆಡಳಿತ ಪಕ್ಷ ಸ್ಪಂದಿಸುತ್ತಿಲ್ಲ ಎಂದು ಧಾರವಾಡ ಮಹಅನಗರ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ಕಲಕುಂಟೆ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಬಿಟ್ಟು ಬಿಡೆದೆ ಕಾಡುತ್ತಿರುವ ಮಳೆಯಿಂದಾಗಿ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಮಹಾನಗರ ಪಾಲಿಕೆಯ ಮೇಯರ್ ವೀಣಾ
ಭಾರದ್ವಾಜ್ ನಾಪತ್ತೆಯಾಗಿದ್ದಾರೆ.ಆಡಳಿತ ಪಕ್ಷವೂ ಸಹ ಜಿಲ್ಲೆಯ ಕಡೆ ತಿರುಗಿ ನೋಡುತ್ತಿಲ್ಲ ಪಾಲಿಕೆಯ ಕಮಿಷನರ್ ಈಶ್ವರ್ ಉಳ್ಳಾಗಡ್ಡಿಯವರಿಗೆ ಜನರ ಕುರಿತು ಕೆಲಸ ಮಾಡಲು ಮನಸ್ಸಿಲ್ಲ. ಈಗಾಗಲೆ ಕಮಿಷನರ್ ಕಾರ್ಯ ವೈಕರಿ ವಿರುದ್ದ ಜಿಲ್ಲಾ ಉಸ್ತುವಅರಿ ಸಚಿವ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಜಿಲ್ಲಾ ಅಭಿವೃದ್ದಿ ಕೆಲಸಗಳಿಗೆ ಅವಳಿನಗರಕ್ಕೆ ಅನುಧಾನ ಸಿಗುತ್ತಿಲ್ಲ ಈವರೆಗೂ ಆಡಳಿತ ಪಕ್ಷ ಬಿಜೆಪಿ ಪಕ್ಷದ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಪಕ್ಷ ಬೇಧ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
Brand Bangalore : ಬ್ರ್ಯಾಂಡ್ ಬೆಂಗಳೂರು ಯೋಜನೆಗಾಗಿ ಸರ್ಕಾರದ ಮಹತ್ವದ ನಿರ್ಧಾರ….!
Degree Exam : ದಕ್ಷಿಣ ಕನ್ನಡದಾದ್ಯಂತ ಮಳೆ ಹಿನ್ನೆಲೆ ಪದವಿ ಪರೀಕ್ಷೆ ಮುಂದೂಡಿಕೆ