ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ಪಶ್ಚಿಮ ಘಟ್ಟದ ಪ್ರದೇಶಗಳು ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆಗಳು ಹಲವೆಡೆ ಬಂದ್ ಅಗಿವೆ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಮಳೆ ಯಿಂದಾಗಿ ಗುಡ್ಡ ಕುಸಿತ ಉಂಟಾದ ಕಾರಣ ರಸ್ತೆ ದುರಸ್ಥಿ ಕಾಮಗಾರಿ ನಡೆಯುತ್ತಿದೆ ಹಾಗಾಗಿ ರಸ್ತೆಯನ್ನು ದುರಸ್ತಿ ಕಾರ್ಯ ಮುಗಿಯುವವರೆಗೂ ಬಂದ್ ಮಾಡಲಾಗಿದೆ ಆದರೆ ರಸ್ತೆ ದುರಸ್ಥಿ ನಡೆಯುತ್ತಿರುವ ಸ್ಥಳದಲ್ಲೇ ಮತ್ತೆ ಗುಡ್ಡ ಕುಸಿತ ಉಂಟಾದ ಕಾರಣ ಕಾಮಗಾರಿ ನಡೆಸುವುದಕ್ಕೆ ತೊಂದರೆ ಉಂಟಾಗಿದೆ.
ಚಾರ್ಮುಡಿ ಘಾಟ್ ನಲ್ಲಿಯೂ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಲ್ಲಿಯೂ ಸಹ ಕಾಮಗಾರಿ ನಡೆಯುವ ಸ್ಥಳದಲ್ಲೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಆಂತಕ ಮನೆ ಮಾಡಿದೆ. ಹೀಗಾಗಿ ರಾತ್ತಿವೇಳೆಯಲ್ಲಿ ಲಘು ವಾಹನ ಸಂಚಾರಕ್ಕೆ ನಿಷೇದ ಹೇರಲು ಚಿಂತನೆ ನಡೆಯುತ್ತಿದೆ.ಹಾಗೆಯೆ ಇದೇ ರೀತಿ ಗಾಳಿ ಮಳೆಗೆ ಬೆಟ್ಟ ಕುಸಿತವಾದರೆ ರಸ್ತೆ ಸಂಪರ್ಕ ಕಡಿತವಾಗುವ ಭೀತಿಯು ಎದುರಾಗಿದೆ.
Budjet: ಹುಬ್ಬಳ್ಳಿ ಅಭಿವೃದ್ದಿಗೆ ಅನುದಾನ ಸಿಗುತ್ತಿಲ್ಲ.ವಿಪಕ್ಷ ನಾಯಕಿ ಆರೋಪ