Monday, April 21, 2025

Latest Posts

Rain : ಅಂತ್ಯಕ್ರಿಯೆಗೂ ಅಡ್ಡಿಯಾದ ಮಳೆ ಅಬ್ಬರ…!

- Advertisement -

Kushalanagara News : ಮಳೆಯ ಅವಾಂತರಕ್ಕೆ ರಾಜ್ಯವೇ ತತ್ತರಿಸಿ ಹೋಗಿವೆ. ಮಳೆ  ನೀರಿನ ಅವಾಂತರದಿಂದಾಗಿ ಇದೀಗ ಹೆಣ ಸುಡಲೂ ಜಾಗವಿಲ್ಲದಂತಾಗಿದೆ.

ಹೌದು ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಮಹಿಳೆ ಮೃತಪಟ್ಟಿದ್ದು ಕಾವೇರಿ ಪ್ರವಾಹದ ಹಿನ್ನೆಲೆ ಅವರ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ಎದುರಾಯಿತು.

ಹಕ್ಕೆ ಗ್ರಾಮದ ಮಹಿಳೆ ಮಂಚಮ್ಮ ಎಂಬುವರು ಭಾನುವಾರ ರಾತ್ರಿ ಮೃತಪಟ್ಟಿದ್ದು ಗ್ರಾಮದ ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಈ ಬಗ್ಗೆ ತಹಸೀಲ್ದಾರ್‌ ಗಮನ ಸೆಳೆಯಲಾಯಿತು. ನಂತರ ಸ್ಥಳೀಯ ಗ್ರಾಮ ಲೆಕ್ಕಿಗರು ನೊಂದವರ ಮನೆಗೆ ತೆರಳಿ ಬೇರೆ ಜಾಗಕ್ಕೆ ಕ್ರಮ ಕೈಗೊಂಡಿದ್ದು ಕೂಡಿಗೆ ಗ್ರಾಮದ ವ್ಯಾಪ್ತಿಯ ನದಿ ತಟದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

Siddaramaiah : ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ

ಉಡುಪಿ : ಶಾಲೆ, ಪಿಯು ಕಾಲೇಜುಗಳಿಗೆ  ಜುಲೈ 26ರ ಬುಧವಾರ ರಜೆ ಘೋಷಣೆ

ಡಿಕೆಶಿ ಭೇಟಿಯಾದ ನಟ ವಿಜಯರಾಘವೇಂದ್ರ ದಂಪತಿ

 

- Advertisement -

Latest Posts

Don't Miss