Monday, October 6, 2025

Latest Posts

ಭಾರತದಲ್ಲಿ ಶತಕ ದಾಟಿದ ಸಾವಿನ ಸಂಖ್ಯೆ

- Advertisement -

ಕರ್ನಾಟಕ ಟಿವಿ : ಕೊವೀಡ್ ಸೋಂಕಿಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 100 ದಾಟಿದೆ.. ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು ಇದುವರೆಗೂ 32 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ, ತೆಲಂಗಾಣ, ಗುಜರಾತ್ ನಲ್ಲಿ ತಲಾ 11 ಮಂದಿ ಕೊರೊನಾಗೆ ಬಲಿಯಾಗಿದ್ದು ಸೋಂಕಿತರ ಸಂಖ್ಯೆ ಸಹ ಹೆಚ್ಚಾಗ್ತಿದೆ.  ಪಶ್ಚಿಮಬಂಗಾಳ ಹಾಗೂ ದೆಹಲಿಯಲ್ಲಿ ಇದುವರೆಗೂ ತಲಾ 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪಂಜಾಬ್ ನಲ್ಲಿ ಐವರು ಕರ್ನಾಟಕದಲ್ಲಿ ನಾಲ್ವರು ಕೊರೊನಾ ಮಹಾಮಾರಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.. ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಕೇರಳಾದಲ್ಲಿ ಸನ್ನಿವೇಶ ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸುತ್ತಿರೋದು ಆತಂಕಕ್ಕೆ ಕಾರಣವಾಗಿದೆ.. ಜನ ಮನೆಯಿಂದ ಹೊರ ಬಾರದೆ ಲಾಕ್ ಡೌನ್ ಪಾಲಿಸಿದ್ರೆ ಕೊರೊನಾ ವೇಗವಾಗಿ ಹರಡೋದನ್ನ ತಡೆಗಟ್ಟಬಹುದಾಗಿದೆ.

- Advertisement -

Latest Posts

Don't Miss