ಕಾರ್ಗಿಲ್: ಜುಲೈ 15 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದಅಕ್ಚಮಾಲ್ ನಿವಾಸಿ ಬಲ್ಕಿಸ್ ಬಾನುಗಾಗಿ ಲಡಾಕ್ ಪೋಲಿಸರುಲುಕ್ ಔಟ್ ನೋಟಿಸ್ ನೀಡಿದ್ದರು ಕಾರ್ಗಿಲ್ ಪೋಲಿಸ್ ಠಾಣಿಯಿಂದ ಅಲ್ಲಲ್ಲಿ ಆಕೆಯ ಭಾವಚಿತ್ರ ಒಳಗೊಂಡ ಕಾಣೆಯಾಗಿದ್ದಾಳೆ ಎಂಬ ಕರಪತ್ರವನ್ನು ಅಲ್ಲಲ್ಲಿ ಪ್ರಸಾರ ಮಾಡಲಾಗಿತ್ತು ಮಹಿಳೆಯನ್ನು ಗುರುತಿಸುವ ಸಲುವಾಗಿ ಆಕೆ ಕೆಂಪು ಸ್ವೆಟರ್ ಧರಿಸಿದ್ದಳು ಮತ್ತು ಹಸಿರು ಶಾಲು ಹಾಗೂ ಆಕೆ ಎತ್ತರ ಸುಮಾರು ಐದು ಅಡಿ ಎಂದು ಬರೆಯಲಾಗಿತ್ತು.
ಇನ್ನು ಈ ಮಹಿಳೆ ಬಲ್ಕಿಸ್ ಎಂಬುದನ್ನು ಖಚಿತಪಡಿಸಿಕೊಕಳ್ಳಲುಡಿಎನ್‌ಎ ಪರೀಕ್ಷೆ ಬಾಕಿ ಉಳಿದಿದ್ದು, ವಿದೇಶಾಂಗ ಸಚಿವಾಲಯಗಳ ನಡುವಿನ ಸಮನ್ವಯದ ನಂತರ ಆಕೆಯ ದೇಹವನ್ನು ಭಾರತಕ್ಕೆ ಹಿಂತಿರುಗಿಸಬಹುದು ಎಂದು ಪಾಕಿಸ್ತಾನಿ ಪತ್ರಿಕೆ ವರದಿ ಮಾಡಿತ್ತು.ಈತನ್ಮಧ್ಯೆ, ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಮಹಿಳೆಯ ಅಂತ್ಯಕ್ರಿಯೆಯನ್ನು ಪ್ರಾರ್ಥನೆಯೊಂದಿಗೆ ಸಮಾಧಿ ಮಾಡಲಾಯಿತು.
ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲ ನಾಪತ್ತೆಯಾಗಿದ್ದ ಭಾರತೀಯ ಮಹಿಳೆಯೊಬ್ಬರು ಬುಧವಾರ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಡಾನ್ ಪತ್ರಿಕೆಯ ವರದಿ ಪ್ರಕಾರ, 28 ವರ್ಷದ ಮಹಿಳೆಯ ದೇಹವನ್ನು ಕಾರ್ಗಿಲ್ ನದಿಯಿಂದ ಹೊರ ತೆಗೆಯಲಾಗಿದೆ. ಮತ್ತು ಜಿಬಿಯ ಖರ್ಮಾಂಗ್ ಜಿಲ್ಲೆಯಲ್ಲಿ ಶವವನ್ನು ಸಮಾಧಿ ಮಾಡಲಾಗಿದೆ ಎಂದು ಜಿಲ್ಲೆಯ ಜಿಲ್ಲಾಧಿಕಾರಿ ಮುಹಮ್ಮದ್ ಜಾಫರ್ ಖಚಿತಪಡಿಸಿದ್ದಾರೆ.
Raghav Chadda : ರಾಘವ್ ಚಡ್ಡಾಗೆ ಕುಕ್ಕಿದ ಕಾಗೆ : ಶನಿ ದೋಷ ಎಂದ ನೆಟ್ಟಿಗರು…!
Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

