ರಾಷ್ಟ್ರೀಯ ಸುದ್ದಿ: ಪ್ರತಿ ಹತ್ತು ವರ್ಷಕ್ಕೊಮ್ಮೆ ನಿಮ್ಮ ಅಧಾರ್ ಕಾರ್ಡನ್ನು ನವೀಕರಣಗೊಳಸಬೇಕು ಎಂದು ಪದೇ ಪದೇ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶಗಳು ಬರುತ್ತಿರುತ್ತವೆ ಯಾಕೆಂದರೆ ಈಗಿನ ದಿನಮಾನದಲ್ಲಿ ಪ್ರತಿಯೊಂದಕ್ಕೂ ಅಧಾರ್ ಕಾರ್ಡ ಕಡ್ಡಾಯವಾಗಿದೆ ನಿಮ್ಮ ಆಧಾರ್ ಕಾರ್ಡ ಬಳೆಸಿ ಸಾಕಷ್ಟು ಕೆಲಸಗಳನ್ನು ಬೇರೆಯವರು ಮಾಡಿಕೊಳ್ಳುವ ಸಂದರ್ಭ ಬಂದರೂ ಬರಬಹುದು ಆದರೆ ಅದಕ್ಕೆಲ್ಲ ನೀವು ಅವಕಾಶ ಮಾಡಿಕೊಡಬಾರದು.
ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಗ್ರಾರಂಟಿಗಳನ್ನು ಪಡೆಯಲು ಆಧಾರ್ ಕಾರ್ಡ ಕಡ್ಡಾಯವಾಗಿದೆ. ಮಹಿಳೆಯರು ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ ಹೊಂದಿರತಕ್ಕದ್ದು ಹೀಗೆ ಎಲ್ಲಾ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ ಕಡ್ಡಾಯವಾದ ಕಾರಣ ಪ್ರತಿಯೊಬ್ಬರು ಅಧಾರ್ ಹೊಂದಿರತಕ್ಕದ್ದು.
ಮಕ್ಕಳಿರುವಾಗ ಅಧಾರ್ ಕಾರ್ಡ್ ಮಾಡಿಸಿದ್ದರೆ ನೀವು ಈವಾಗ ಬೆಳೆದು ದೊಡ್ಡವರಾಗಿರುತ್ತೀರಾ ಮೊದಲಿನ ಭಾವಚಿತ್ರಕ್ಕೂ ನೀವು ಈಗಿರುವ ಸ್ತಿತಿಗೂ ಬಹಳ ವ್ಯತ್ಯಾಸಗಳಾಗಿರುತ್ತವೆ ಅದಕ್ಕಾಗಿ ನಿಮ್ಮ ಗುರುತನ್ನು ಸುಲಭವಾಗಿ ಗುರುತಿಸಲು ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕಿದೆ .ಐದು ವರ್ಷ ಮೇಲ್ಪಟ್ಟು ಮತ್ತು 7 ವರ್ಷ ಒಳಗಿನ ಎಲ್ಲಾ ಮಕ್ಕಳು ಬಯೋಮೆಟ್ರಿಕ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ನವೀಕರಿಸಬೇಕು, ಅಲ್ಲದೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್ ಕಾರ್ಡ ಅನ್ನು ನವೀಕರಿಸಬೇಕಿದೆ.ಇದಕ್ಕೆ ಕಾರಣ ವ್ಯಕ್ತಿಯ ಮಾಹಿತಿಯನ್ನು ಅಪ್ಡೆಟ್ ಮಾಡಲು ಮತ್ತು ದುರುಪಯೋಗಗಳನ್ನ ತಪ್ಪಿಸಲು ನವೀಕರಿಸಬೇಕೆಂದು ಪದೇ ಪದೇ ಸಂದೇಶಗಳೂ ಬರುತ್ತಿವೆ
5 ರಿಂದ 7 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಬಯೋಮೆಟ್ರಿಕ್ ಉಚಿತವಾಗಿದ್ದು ಹೆಸರು ವಿಳಾಸ ವಯಸ್ಸು ಲಿಂಗ ಮೊಬೈಲ್ ನಂಬರ್ ನವೀಕಣಕ್ಕೆ 50 ರೂ ಮತ್ತು ಕಣ್ಣು ಮುಖ ಕೈ ಬೆರಳು ವಿವರಗಳ ನವೀಕರಣಕ್ಕೆ 100 ಶುಲ್ಕ ಪಾವತಿ ಮಾಡಬೇಕು ಸಾರ್ವಜನಿಕರು ಇದಕ್ಕಿಂತ ಜಾಸ್ತಿ ಪಾವತಿ ಮಾಡಬೆಕಿಲ್ಲ.
School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
School Holiday: ಧಾರವಾಡ ಜಿಲ್ಲೆಗಳಲ್ಲಿ ಮಳೆಯ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ