ರಾಷ್ಟ್ರೀಯ ಸುದ್ದಿ: ನೀವು ರೈಲಿನ್ಲಲಿ ಪ್ರಯಾಣ ಬೆಳೆಸುವಾಗ ನಿಮ್ಮ ಮೊಬೈಲ್ ಬ್ಯಾಟರಿ ಖಾಲಿಯಾಗಿದೆ ಎಂದು ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಅನ್ನು ಚಾರ್ಜ ಹಾಕಿದರೆ ಹುಷಾರ್..! ಯಾಕೆಂದರೆ ನಿಮ್ಮ ರಹಸ್ಯ ದಾಖಲೆಗಳನ್ನೆಲ್ಲ ಸೈಬರ್ ಖದೀಮರು ಕಳ್ಳತನ ಮಾಡುತ್ತಾರೆ ಹೇಗೆ ಅಂತೀರಾ ಇಲ್ಲಿದೆ ನೊಡಿ ಮಾಹಿತಿ.
‘ಜ್ಯೂಸ್ ಜಾಕಿಂಗ್.’ಎನ್ನುವುದು ಒಂದು ಸೈಬರ್ ಹ್ಯಾಕ್ ಆಗಿದ್ದು ಈ ತಂತ್ರವನ್ನು ಬಳಸಿ ಹ್ಯಾಕರ್ ಗಳು ಬಳಕೆದಾರರ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳನ್ನು ಹ್ಯಾಕ್ ಮಾಡಲು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್ ಗಳು ನಕಲಿ ಚಾರ್ಜಿಂಗ್ ಪೋರ್ಟಲ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುತ್ತಾರೆ ಈ ಹಗರಣವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಹ್ಯಾಕಿಂಗ್ ಮಾಡುತ್ತಿದ್ದಾರೆ
ಈ ಹಿಂದೆ, ಸಾರ್ವಜನಿಕ ಚಾರ್ಜಿಂಗ್ ಡಾಕ್‌ಗಳನ್ನು ಬಳಸುವುದರಿಂದ ಅನೇಕ ತೊಂದರೆ ಆಗುತ್ತಿದೆ ಎಂದು ಅಮೇರಿಕಾ ಅಲ್ಲಿನ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿತ್ತು. ಹೀಗಾಗಿ ಮಾಲ್‌ಗಳು ಮತ್ತು ಮಾರುಕಟ್ಟೆಗಳಂತಹ ಸ್ಥಳಗಳಲ್ಲಿ ಕಂಡುಬರುವ ಸಾರ್ವಜನಿಕ ಚಾರ್ಜರ್‌ಗಳಲ್ಲಿ ಮೊಬೈಲ್ ಚಾರ್ಜ್ ಮಾಡದೆ ತಮ್ಮದೇ ಆದ ಪವರ್ ಬ್ಯಾಂಕ್‌ಗಳನ್ನು ಕೊಂಡೊಯ್ಯಲು ಎಫ್‌ಬಿಐ ಜನರಿಗೆ ಸೂಚಿಸಿತ್ತು. ಇದೀಗ ಈರೀತಿ ಪ್ರಕರಣಗಳು ದೇಶದಲ್ಲೂ ಕಂಡುಬಂದಿದೆ. ಅದಕ್ಕಾಗಿ ನೀವು ಒಂದು ಪವರ್ ಬ್ಯಾಂಕ್ ಗಳನ್ನು ಬಳೆಸುವುದು ಉತ್ತಮವಾಗಿದೆ.
KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು
MB Pateel : ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ..!