Karkala News : ಬಜಗೋಳಿ,ಮಾಳ ಸೇರಿದಂತೆ ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಹಾನಿಯುಂಟಾಗಿದೆ.
ನಂದಳಿಕೆ ಗ್ರಾಮದ ದೇವಾಸ್ಥಾನ ಬಳಿಯ ನಿವಾಸಿ ಸುಬ್ರಹ್ಮಣ್ಯ ಭಟ್‍ರವರ ಮನೆಯ ಮುಂಭಾಗ ಹಾಕಲಾದ ತಗಡು ಶೀಟು ಬಿದ್ದು ಸುಮಾರು 10 ಸಾವಿರಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹಾಗೂ ನಂದಳಿಕೆ ನಿವಾಸಿ ಶಿವಪ್ರಸಾದ್ ರಾವ್ ರವರ ತೋಟದಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಗಾಳಿಯ ರಭಸಕ್ಕೆ ಧರೆಗೆ ಉರುಳಿದ್ದು ಸುಮಾರು 20 ಸಾವಿರ ರೂಪಾಯಿಯ ನಷ್ಟ ಉಂಟಾಗಿದೆ. ಮತ್ತು ಕಾರ್ಕಳ ಕರಿಯಕಲ್ಲು ಎಂಬಲ್ಲಿ ಗಿರಿಜಾ ಗ್ಯಾರೇಜ್ ಬಳಿಯಲ್ಲಿ ಬೃಹತ್ ಮರವೊಂದು ಬಿದ್ದು ವಿದ್ಯುತ್ ಕಂಬ ಸಹಿತ ಮನೆಯ ಆವರಣಗೋಡೆ ಕುಸಿದು ಅಪಾರ ನಷ್ಟ ಉಂಟಾಗಿದೆ. ‘
ಹೀಗೆ ಕಾರ್ಕಳ ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಮಳೆಯ ಜೊತೆಯಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಮರಗಳು ಧರೆಗೆ ಉರುಳಿದ್ದು ಅಪಾರ ನಷ್ಟ ಉಂಟಾಗಿದೆ.
School : ಎಣ್ಮಕಜೆ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆಗೆ ಸ್ವಾಗತ ಸಮಿತಿ ರೂಫೀಕರಣ ಸಭೆ
School : ಕ್ರೈಸ್ಟ್‍ಕಿಂಗ್ ಪದವಿಪೂರ್ವ ವಿದ್ಯಾರ್ಥಿಗಳಿಂದ ಚೇತನಾ ವಿಶೇಷ ಶಾಲೆಗೆ ಅಧ್ಯಯನ ಭೇಟಿ
Collage : ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ