Karkala News : ಕರಾವಳಿಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಹಳ್ಳ ನದಿ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಬೀರಿದರೆ ಮತ್ತೊಂದೆಡೆ ಅನಾಹುತಗಳು ಸಂಭವಿಸಿ ಅನೇಕ ಹಾನಿಗಳು ಕೂಡ ಸಂಭವಿಸುತ್ತಿವೆ.
ಇನ್ನೂ ಇವೆಲ್ಲದರ ನನಡುವೆ ಪ್ರಕೃತಿ ತನ್ನ ಚೆಲುವನ್ನು ಬಿಂಬಿಸುತ್ತಿದ್ದಾಳೆ. ಇತ್ತ ಕಾರ್ಕಳದ ಶಾಂಭವಿ ನದಿ ಉಕ್ಕಿ ಹರಿದು ಮನಮೋಹಕ ದೃಶ್ಯ ಕಂಡು ಬಂದಿದೆ. ದೃಶ್ಯ ಮನಮೋಹಕವಾಗಿದ್ದರೂ ಜನಸಂಚಾರಕ್ಕೆ ತೊಡಕಾಗಿದೆ.
ಭಾನುವರ ಜುಲೈ 23ರಂದು ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಶಾಂಭವಿ ನದಿಯೂ ಉಕ್ಕಿ ಹರಿಯುತ್ತಿದ್ದು ಮುಂಡ್ಕೂರು ಗ್ರಾಮದಿಂದ ಉಳೆಪಾಡಿ ಪರಿಸರವನ್ನು ಸಂಪರ್ಕಿಸುವ ಪ್ರಮುಖ ಅಣೆಕಟ್ಟಿನ ಮೇಲ್ಬಾಗದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿದಿದೆ.
ಸೇತುವೆಯ ಮೇಲ್ಬಾಗದಲ್ಲಿ ನೀರು ಹರಿದ ಪರಿಣಾಮ ಉಳೆಪಾಡಿ ಭಾಗದ ಜನ ಸುಮಾರು 7-8 ಕಿ.ಮೀ ಸುತ್ತಿ ಬಳಸಿಕೊಂಡು ಮನೆ ಸೇರುವಂತಾಗಿದೆ.
School : ಎಣ್ಮಕಜೆ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆಗೆ ಸ್ವಾಗತ ಸಮಿತಿ ರೂಫೀಕರಣ ಸಭೆ
School : ಕ್ರೈಸ್ಟ್‍ಕಿಂಗ್ ಪದವಿಪೂರ್ವ ವಿದ್ಯಾರ್ಥಿಗಳಿಂದ ಚೇತನಾ ವಿಶೇಷ ಶಾಲೆಗೆ ಅಧ್ಯಯನ ಭೇಟಿ


