Dharwad News : ಧಾರವಾಡದ ಶಿವನಗರ ಗ್ರಾಮದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಅವಳಿ ನಗರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಅನಾಹುತಗಳು ಸಂಭವಿಸುತ್ತಲೇ ಇದೆ. ಇಂದು ಅಂದರೆ ಜುಲೈ 27 ರಂದು ಸತತ ಮಳೆಗೆ ಸರ್ಕಾರಿ ಶಾಲೆಯ ಗೋಡೆ ಕುಸಿದ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಗೋಡೆ ಧಿಡೀರ್ ಕುಸಿತದಿದೆ. ಶಾಲೆಗೆ ರಜೆ ಘೋಷಣೆ ಹಿನ್ನೆಲೆ ಇಂದು ಯಾರು ವಿದ್ಯಾರ್ಥಿಗಳು ಶಾಲೆಗೆ ಬಂದಿಲ್ಲ. ಈ ಕಾರಣದಿಂದ ದೊಡ್ಡ ಪ್ರಮಾಣದ ಹಾನಿ ತಪ್ಪಿದೆ. ಗೋಡೆ ಕುಸಿದ ಪರಿಣಾಮ ಶಾಲೆಯ ಕೊಠಡಿ ಒಳಭಾಗದಲ್ಲಿಯೇ ಗೋಡೆ ಬಿದ್ದಿದೆ. ನಿರಂತರ ಮಳೆಗೆ ಸಂಪೂರ್ಣ ನೆನೆದಿದ್ದ ಗೋಡೆ ಇಂದು ಕುಸಿತಗೊಂಡಿದೆ. ಈ ಹಿನ್ನೆಲೆ ಗೋಡೆಯ ಮುಂಭಾಗ ಕೂಡ ಸಂಪೂರ್ಣ ಕುಸಿತಗೊಂಡಿದೆ.
ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು ಡಿಸಿ ರಜೆ ನೀಡಿದ್ದರು. ಧಾರವಾಡ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದರಿಂದ ಭಾರೀ ದುರಂತ ತಪ್ಪಿದೆ, ತರಗತಿಗಳು ನಡೆಯುತ್ತಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Pramod Muthalik : ಶಾಸಕ ತನ್ವೀರ್ ಸೇಠ್ ವಿರುದ್ಧ ಪ್ರಮೋದ್ ಮುತಾಲಿಕ್ ಗರಂ
Shambhavi River : ಉಕ್ಕಿ ಹರಿದ ಶಾಂಭವಿ ನದಿ…! ಸಂಚಾರಕ್ಕೆ ಸಂಕಷ್ಟ…!