Monday, December 23, 2024

Latest Posts

Arun Kumar Putthila : ಪುತ್ತಿಲ ಪರಿವಾರದ ವಿರುದ್ದ ಕೇಸ್ ದಾಖಲು..?!

- Advertisement -

Puttur News :  ಪುತ್ತೂರಿನಲ್ಲಿ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಫಲಿತಾಂಶ ಪ್ರಕಟಗೊಂಡ ನಂತರ ನಗರದ ಮುಖ್ಯರಸ್ತೆಯಲ್ಲಿ ಅನುಮತಿಯಿಲ್ಲದೆ ವಿಜಯೋತ್ಸವ ನಡೆಸಿದ ಪುತ್ತಿಲ ಪರಿವಾರದ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಫಲಿತಾಂಶದಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸಿದ್ದ ಆರ್ಯಾಪು ಗ್ರಾಪಂನ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದರು.

ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣೆಯ ಎಣಿಕೆ ನಡೆದ ಪುತ್ತೂರಿನ ತಾಲೂಕು ಆಡಳಿತ ಸೌಧದ ಬಳಿಯಿಂದ ಪುತ್ತಿಲ ಪರಿವಾರದ ಕಚೇರಿ ತನಕ ನಗರದ ಮುಖ್ಯರಸ್ತೆಯಲ್ಲಿ ಡಿಜೆ ಅಳವಡಿಸಿ ಮೆರವಣಿಗೆ ನಡೆಸಲಾಗಿತ್ತು.

ಆದರೆ, ಮೆರವಣಿಗೆ ನಡೆಸಲು ಪೊಲೀಸ್‌ರಿಂದ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆ ಅನಧಿಕೃತ ಮೆರವಣಿಗೆ ನಡೆಸಿದ ಸಂಘಟಕರ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ.

Sharath : ಇನ್ನೂ ಪತ್ತೆಯಾಗಿಲ್ಲ ಜಲಪಾತದಲ್ಲಿ ಜಾರಿಬಿದ್ದ ಯುವಕ…!

Train : ಆಂಧ್ರದಲ್ಲಿ ಕನ್ನಡಿಗ ಪ್ರಯಾಣಿಕರಿಗೆ ಮನಬಂದಂತೆ ಥಳಿತ…?!

Moharam : ಹುಬ್ಬಳ್ಳಿಯ ಬಿಡನಾಳ ಗ್ರಾಮದಲ್ಲಿ ಭಾವೈಕ್ಯತೆಯ ಮೊಹರಂ: ಸೌಹಾರ್ದತೆಗೆ ಸಾಕ್ಷಿಯಾದ ಹಬ್ಬ..!

- Advertisement -

Latest Posts

Don't Miss