Friday, July 4, 2025

Latest Posts

Temple : ಬಡಾಜೆ ಮಹಾಲಿಂಗೇಶ್ವರ ದೇಗುಲದ ವೈಶಿಷ್ಠ್ಯವಿದು….!

- Advertisement -

Manjeshwara temple : ಹಸುರಿನ ಕಾನನದ  ಕಂಗು ತೆಂಗುಗಳ ಗರಿಗಳ ಮದ್ಯದಿಂದ ತಿಳಿಯಾಗಿ ಬೀಸುವ ತಂಗಾಳಿಯು ಬೆಚ್ಚಗೆ ಗರ್ಭಗುಡಿಯಲ್ಲಿ ವಿರಾಜಮನವಾಗಿರುವ ಮಹಾಲಿಂಗೇಶ್ವರನ ಮೃದುವಾಗಿ ಸೋಕಿ ಬಂದು ಭಕ್ತರ ಮನವನ್ನು ಭಕ್ತಿ ಸಾಗರದಾಚೆ ಸೆಳೆಯುವ ಸುಂದರ ದೇವಾಲಯವೇ ಬಡಾಜೆ ಮಹಾಲಿಂಗೇಶ್ವರ ದೇವಸ್ಥಾನ ಮಂಜೇಶ್ವರ.

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಡಾಜೆ ಪ್ರದೇಶದಲ್ಲಿ ಮಹಾಲಿಂಗೇಶ್ವರನು ನೆಲೆ ನಿಂತಿರುವುದರಿಂದ ಬಡಾಜೆ ಮಹಾಲಿಂಗೇಶ್ವರ ಎಂಬ ಹೆಸರು ಬಂತೆಂಬ ಐತಿಹ್ಯವಿದೆ ಪುರಾಣದ ಕಥೆಯನ್ನಾಧರಿಸಿ ಹೇಳುವುದಾದರೆ ಮಹಾಶಿವ ಭಕ್ತನಾದ ರಾವಣನ ತಮ್ಮ ಖರಾಸುರನು ತಪಶಕ್ತಿಯಿಂದ ಪಡೆದ ಲಿಂಗವನ್ನು ಕೈ ಮತ್ತು ಬಾಯಲ್ಲಿ ಕಚ್ಚಿ ತರುತ್ತಿರುವ ವೇಳೆ ಕೈಯಿಂದ ಜಾರಿದ ಶಿವಲಿಂಗಗಳು ಕುಂಜತೂರು ಮತ್ತು ಮುಲಿಂಜದಲ್ಲಿ ಪ್ರತಿಷ್ಠೆಯಾದರೆ ಬಾಯಲಿದ್ದ ಲಿಂಗ ಬಿದ್ದು ಬಡಾಜೆಯಲ್ಲಿ ಪ್ರತಿಷ್ಠೆಯಾಗಿದೆ ಎಂಬ ನಂಬಿಕೆಯಿದೆ. ಬಾಯಿಂದ ಕಚ್ಚಿದರಿಂದ ಎಂಜಲಾಗಿದೆಎಂದು ಪ್ರತಿದಿನ ಅಭಿಷೇಕ ಮಾಡಲಾಗುತ್ತಿದೆ.

ಈ ದೇವಸ್ಥಾನವು ಜೈನ ಶೈವ ಮತ್ತು ಹಿಂದೂ ಪ್ರಕಾರಗಳಲ್ಲಿ ನಿರ್ಮಾಣಗೊಂಡಿದೆ. ಕೆಲವೊಂದು ಮೂಲಗಳ ಪ್ರಕಾರ ವಿಜಯನಗರ ಸಾಮ್ರಾಜ್ಯ, ಕುಂಬಳೆ ಅರಸರು ಮತ್ತು ತುಂಡರಸ ಬಡಜನ ಆಳ್ವಿಕೆಗೂ ಒಳಪಟ್ಟಿದ್ದು ಎನ್ನಲಾಗುತ್ತಿದೆ.

ಇಲ್ಲಿ ನೆಲೆಸಿರುವ ದೈವಗಲದ್ದು ಒಂದು ವಿಶೇಷ ಕಥೆ, ಮುಂಡತಾಯ ದೈವ ಮಹಾಲಿಂಗೇಶ್ವರನಲ್ಲಿ ದೇವಸ್ಥಾನದ ಬಲ ಭಾಗದಲ್ಲಿ ಜಾಗ ನೀಡಬೇಕೆಂದು ಕೇಳಿದಾಗ ಈಗಾಗಲೇ ಸಾವಿರದ ಒಂದು ದೈವಗಳು ಇಲ್ಲಿ ಇವೆ ಅವರನ್ನು ಓಡಿಸಿದರೆ ನಿನಗೆ ಇಲ್ಲಿ ನೆಲೆ ಎಂದು ತಿಳಿಸಿದ ಕಾರಣ ತಂತ್ರಿಗಳ ಸಹಾಯದಿಂದ ಮುಂಡತ್ತಾಯ ದೈವ ಎಲ್ಲಾ ದೈವಗಳನ್ನು ಓಡಿಸಿ ಹಿಂತಿರುಗಿದಾಗ ಪಿಲಿ ಚಂಡಿ ದೈವ ಇಲ್ಲೇ ಇರುವುದನ್ನು ಕಂಡು ಬಲ ಬಾಗದಲ್ಲಿ ಮುಂಡತ್ತಾಯ ನಿಂತರೆ ಎಡ ಬಾಗದಲ್ಲಿ ಪಿಲಿ ಚಂಡಿ ನೆಲೆ ನಿಂತರು.

ದೇವಸ್ಥಾನದಲ್ಲಿ ನವಗ್ರಹ, ಪಡುಗೋಪುರದ ನೈರುತ್ಯ ಮೂಲೆಯಲ್ಲಿ ಗಣಪತಿ ಮತ್ತು ಹೊರಂಗನದ ಬಲ ಭಾಗದಲ್ಲಿ ಮೇಲ್ಚವಣಿ ಇಲ್ಲದ ವನಶಾಸ್ತಾರಗುಡಿ ಪ್ರಕೃತಿ ಆರಾಧನೆಯ ವಿಶೇಷತೆಯನ್ನು ಕಾಣಬಹುದು.

ದೇವರಿಗೆ ಮಕರ ಸಂಕ್ರಮಣದಂದು ವರ್ಷವದಿ ಜಾತ್ರೆ ನಡೆಯುತ್ತದೆ. ಅದರ ಹಿಂದಿನ ಸಂಕ್ರಮಣದಂದು ಕ್ಷೇತ್ರದಲ್ಲಿ ಗಣಪತಿ ಇಡುವ ಕ್ರಮವಿದೆ. ನಂತರ ಜಾತ್ರೆಮುಗಿಯುವ ತನಕ ಯಾವುದೇ ಶುಭ ಕಾರ್ಯಗಳು ಗ್ರಾಮದಲ್ಲಿ ನಡೆಯುವಂತಿಲ್ಲ,ಗ್ರಾಮದಲ್ಲಿದ್ದವರು ಜಾತ್ರೆ ಕಳೆದ ಬಳಿಕವೇ ಅಲ್ಲಿಂದ ಹೋಗಬೇಕು ಎಂಬ ಕರಾಮವಿತ್ತು.

ದೇವಸ್ಥಾನದಲ್ಲಿ ಚೌತಿ, ದೀಪಾವಳಿ ಹಬ್ಬ, ಶಿವರಾತ್ರಿ, ವಿಷು ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ, ಇಲ್ಲಿ ನಿತ್ಯ ಪೂಜೆ ಮತ್ತು ಸಂಕ್ರಮಣದಂದು ವಿಶೇಷ ಸೇವೆಯೊಂದಿಗೆ ಅನ್ನದಾನವು ನಡೆಯುತ್ತದೆ.

52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..

ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನವೆಂಬ ಪ್ರಖ್ಯಾತಿ ಈ 2 ದೇವಾಲಯಕ್ಕಿದೆ..

ದೆವ್ವ ಬಿಡಿಸಲು ಪ್ರಸಿದ್ಧವಾಗಿದೆ ಭಾರತದ ಈ ದೇವಸ್ಥಾನ..

 

- Advertisement -

Latest Posts

Don't Miss