ಹುಬ್ಬಳ್ಳಿ:ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ವಾಣಿಜ್ಯ ನಗರದಲ್ಲಿ ಆಟೋ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ನಡೆಸಿದರು.ನೂರಾರು ಆಟೋ ಚಾಲಕರು, ಮಾಲೀಕರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಶಕ್ತಿ ಯೋಜನೆಯನ್ನ ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು. ಸಂತೋಷ ಲಾಡ್ ಆಗಮಿಸುತ್ತಲೆ ಬಾಯಿ ಬಾಯಿ ಬಡಿದುಕೊಂಡು ಪ್ರತಿಭಟನಾಕಾರರು ಲಾಡ್ ಎದುರು ಅಳಲು ತೊಡಗಿಕೊಂಡರು.
ಆಟೋ ಚಾಲಕರ ಸಂಕಷ್ಟವನ್ನಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಲಿಸಿದರು. ಬಳಿಕ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಸಚಿವ ಸಂತೋಷ ಲಾಡ್ ಗೆ ಮನವಿ ಸಲಿಸಿದರು.
ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಆಟೋ ಚಾಲಕರ ಬೇಡಿಕೆಗಳ ಬಗ್ಗೆ ನೇರವಾಗಿ ಸಿಎಂಮ್ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಸಾರಿಗೆ ಸಚಿವರ ಸಭೆಯಲ್ಲಿ ಯಾವ ತೀರ್ಮಾನವಾಗುತ್ತೆ ಕಾದುನೋಡಬೇಕು. ಸರ್ಕಾರದ ಪ್ರತಿನಿಧಿಯಾಗಿ ನಾನು ಮನವಿ ಸ್ವೀಕರಿಸಿದ್ದೇನೆ. ಮುಂದಿನ ತೀರ್ಮಾನ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೆಗೆದುಕೊಳ್ಳುತ್ತಾರೆ. ಅಟೋ ಚಾಲಕರ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಖರ್ಗೆಯವರು ದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇನೆ. ಪಕ್ಷ ಸಂಘಟನೆ, ಪಾಲಿಸಿ ಮೇಕಿಂಗ್, ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲು ಕರೆದಿದ್ದಾರೆ. ಸಿದ್ದರಾಮಯ್ಯನವರು ಸಭೆಯಲ್ಲಿ ಯಾವುದೇ ಪತ್ರ ಹರಿದಿಲ್ಲ. ನಾನು ಸಭೆಯಲ್ಲಿ ಇದ್ದೆ, ಲೆಟರ್ ಹರಿದಿದ್ದಂತೂ ನಾನು ನೋಡಿಲ್ಲ. ಹಾಗೇನು ಆಗಿಲ್ಲ ಈ ಕುರಿತು ಹೆಚ್ಚಿನ ನನಗೆ ಮಾಹಿತಿ ಇಲ್ಲ.
ಅಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ನೀಡುವ ಕುರಿತು ಶೀಘ್ರದಲ್ಲೇ ಕ್ರಮ ತಗೆದುಕೊಳ್ಳಲಾಗುವದು. ನಮ್ಮ ಸರ್ಕಾರ ಬಡವರ ಹಿಂದುಳಿದ ವರ್ಗಗಳ ಪರವಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕರಿಸಲಾಗುತ್ತಿದೆ. ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಣ ನೀಡಲಾಗುವುದು ಎಂದರು.
Namma metro: ಪ್ಲಾಟ್‌ಫಾರ್ಮ್ ಪರದೆಯ ಬಾಗಿಲುಗಳನ್ನು ಪಡೆಯಲು ಮೆಟ್ರೋ ಟೆಂಡರ್ ಅನ್ನು ವಿಸ್ತರಿಸಿದೆ