Friday, October 18, 2024

Latest Posts

Tirupathi: ತಿಮ್ಮಪ್ಪನಿಗೆ ಸಂಕಟ ತಂದ ಹಾಲಿನ ದರ ಪರಿಷ್ಕರಣೆ

- Advertisement -

ರಾಷ್ಟ್ರೀಯ  ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಿಂದಾಗಿ ಹೋಟೆಲ್ ಮಾಲಿಕರು ತಿಂಡಿ ಊಟ ಟಿ ಕಾಫಿ ಇವೆಲ್ಲದರ ಬೆಲೆಯನ್ನು ಜಾಸ್ತಿ ಮಾಡಿಯಾಗಿದೆ. ಇವೆಲ್ಲ ನಿಮಗೆ ಗೊತ್ತಿರವ ವಿಚಾರ ಆದರೆ ಹಾಲಿನ ದರ ಪರಿಷ್ಕರಣೆಯಿಂದಾಗಿ ಇರುಪತಿ ತಿಮ್ಮಪ್ಪನಿಗೆ ಬಹಳ ಸಂಕಟ ಉಂಟಾಗಿದೆ . ಯಾಕೆ ಅಂತೀರಾ ಇಲ್ಲಿದೆ ನೋಡಿ ಅದರ ಅಸಲಿ ಕಥೆ.

ತಿರುಪತಿ ತಿಮ್ಮಪ್ಪ ಬಹಳ ಶ್ರೀಮಂತ ದೇವರು, ರತ್ನ ಖಚಿತ ಗೋಪುರ ವಜ್ರ ಕಚಿತ ಕಿರೀಟ ಹೀಗೆ ಒಂದಾ ಎರಡಾ ಹೇಳುತ್ತಾ ಹೋದರೆ ಅವರ ರೆಕಾರ್ಡ್ಗಳುಹಲವಾರು ಇದೆ ಅದೇ ರೀತಿ ತಿಮ್ಮಪ್ಪನ ದರ್ಶನಕ್ಕೆ ಹೋದಂತಹ ಭಕ್ತರು  ವಾಪಸ್ ಬರೋವಾಗ ಬರಿಗೈಲಿ ಬರೋಕೆ ಸಾದ್ಯಾನೆ ಇಲ್ಲ ಯಾಕೆಂದರೆ ಅಲ್ಲಿರುವಸ್ವಾದಿಷ್ಟ ಲಾಡುಗಳು.

ಹೌದು ಭಕ್ತರಿಗೆ ತಿರುಪತಿ ತಿಮ್ಮಪ್ಪ ಎಷ್ಟು ಪ್ರಿಯವೂ ಅಷ್ಟೇ ಪ್ರೀತಿ ಅಲ್ಲಿ ಸಿಗುವ ಲಡ್ಡುಗಳ ಮೇಲೆ  . ಹೌದು ಇದೆಲ್ಲ ಯಾಕೀಗ ಅಂತೀರಾ ಇನ್ನುಮುಂದೆ ಆ ಸ್ವಾದಿಷ್ಟ ಸಿಗಲು ಸಾದ್ಯವಿಲ್ಲ. ಯಾಕೆಂದರೆ ಅಲ್ಲಿ ಸಿಗುವ ಲಡ್ಡುಗಳು ಅಸಲಿಗೆ ತಯಾರಾಗುತ್ತಿದ್ದದ್ದುಕರ್ನಾಟಕದ ನಂದಿನಿಯ ತುಪ್ಪದಿಂದ .ಆದರೆ ಇನ್ನು ಮುಂದೆ  ಕೆಎಂ ಎಫ್ ತಿರುಪತಿ ಲಡ್ಡನ್ನು ತಯಾರಿಸಲು ನಂದಿನಿ ತುಪ್ಪವನ್ನು  ಸರಬರಾಜು ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ ಒಂದು ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ನೀಡಬೇಕು, ಈತನಕ ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್​ ಅನ್ನು ಕೈಬಿಟ್ಟಿದೆ, ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕರ್ನಾಟಕದಲ್ಲಿ ಹಾಲಿನ ಕೊರತೆಯೂ ತಲೆದೋರಿರುವುದರಿಂದ ಅದರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದು ನಮಗೂ ಕೂಡ ಅನಿವಾರ್ಯವಾಗಿದೆ. ಹೀಗಾಗಿ ನಂದಿನಿ ತುಪ್ಪದ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್​ ನಿರ್ಧರಿಸಿದೆ.ಕರ್ನಾಟಕದ ಹಾಲಿನ ದರ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಮಾತ್ರವಲ್ಲ ತಿರುಪತಿ ತಿಮ್ಮಪ್ಪನಿಗೆ ಸಂಕಟ ತಂದಿದೆ.

 

- Advertisement -

Latest Posts

Don't Miss