ಬೆಂಗಳೂರು : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ.. ಲಾಕ್ ಡೌನ್ ಹಿನ್ನೆಲೆ ಕೂಲಿಕಾರ್ಮಿಕ, ಜನಸಾಮಾನ್ಯ ಸಮಸ್ಯೆ ಸಿಲುಕಿದ್ದಾನೆ.. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಆಹಾರವಿಲ್ಲದೆ ಪರಿತಪ್ಪಿಸುವಂತಾಗಿದೆ. ಈ ಹಿನ್ನೆಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಹಸಿದವರಿಗೆ ಅನ್ನದಾಸೋಹ ಪ್ರಾರಂಭಿಸಿದ್ದಾರೆ. ಮಲ್ಲಸಂದ್ರ, ಚಿಕ್ಕಬಾಣಾವಾರ ಮತ್ತು ಸೋಮಶೆಟ್ಟಿಹಳ್ಳಿ ವ್ಯಾಫ್ತಿಯ ಕಾನ್ಷಿರಾಂ ನಗರದ ಲ್ಲಿಹೆಚ್ಡಿಕೆ ಕ್ಯಾಂಟಿನ್ ಗೆ ಚಾಲನೆ ನೀಡಿದ್ದಾರೆ.. ಹೆಚ್ಡಿಕೆ ಕ್ಯಾಂಟಿನಲ್ಲಿ ನಿತ್ಯ ಸಾವಿರಾರು ಜನರಿಗೆ ಊಟ ಸಿಗಲಿದೆ.. ಇನ್ನು ಕ್ಯಾಂಟಿನ್ ಗೆ ಶಾಸಕರಾದ ಮಂಜುನಾಥ್ ಚಾಲನೆ ನೀಡಿದ್ರು. ಈ ವೇಳೆ ಜೆಡಿಎಸ್ ವಿಧಾನಪರಿಷತ್ ಸದಸ್ಯರಾದ ಶರವಣ ಹಾಗೂ ತಿಪ್ಪೇ ಸ್ವಾಮಿ ಹಾಜರಿದ್ರು. ಇದಲ್ಲದೇ ಸ್ಥಳೀಯ ಜೆಡಿಎಸ್ ಮುಖಂಡರಾದ ಗುಂಡಪ್ಪ, ಗೋಪಾಲಣ್ಣ, ಬಿ.ಎನ್ ಜಗದೀಶ್, ವರದರಾಜು, ಚರಣ್ ಗೌಡ್ರು, ಗೋವಿಂದರಾಜು, ರಾಜಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ರು..
ಸೂರಜ್ ಕುಮಾರ್, ಕರ್ನಾಟಕ ಟಿವಿ, ಬೆಂಗಳೂರು




