Tuesday, October 14, 2025

Latest Posts

ಅಲೆಮಾರಿಗಳಿಗೆ ಆಶ್ರಯ – ತಹಶೀಲ್ದಾರ್ ಕಾರ್ಯಕ್ಕೆ ಮೆಚ್ಚುಗೆ

- Advertisement -

ಕರ್ನಾಟಕ ಟಿವಿ ಮಂಡ್ಯ : ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ 13 ದಿನದ ಸಣ್ಣ ಮಗು ಹಾಗು ಸುಮಾರು 10ಕ್ಕೂ ಹೆಚ್ಚು ಮಕ್ಕಳೊಂದಿಗೆ ಮರದ ಕೆಳಗೆ ವಾಸವಾಗಿದ್ದ ,  ಕೂದಲು ವ್ಯಾಪಾರಿಗಳ 9 ಕುಟುಂಬಗಳಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಜೀವನಕ್ಕೆ ಕೂದಲು ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ಇವರು ಲಾಕ್ ಡೌನ್ ನಿಂದ ವಸತಿ ಹಾಗೂ ಆಹಾರ ಕೊರತೆಯಿಂದ ಕಂಗಾಲಾಗಿದ್ದರು. ಈ ವಿಷಯವನ್ನು  ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜನಪರ ಚಿಂತಕರಾದ ದೇವರಾಜ್ ಕೊಪ್ಪ, ಚಂದ್ರಶೇಖರ್ ಗೊರವಾಲೆ, ಲಕ್ಷ್ಮಣ್  ಚಂದಗಾಲು ರವರು ವಸತಿ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸುವಂತೆ, ಮಂಡ್ಯ ತಹಸೀಲ್ದಾರರ ಗಮನಕ್ಕೆ  ಒತ್ತಾಯಿಸಿದ್ರು.. ಇದಕ್ಕೆ ತಕ್ಷಣ ಸ್ಪಂದಿಸಿದ ಮಂಡ್ಯ ತಹಸೀಲ್ದಾರ್ ರವರು ಆ ಎಲ್ಲಾ ಜನರಿಗೂ ಮಂಡ್ಯದ ಬಿ.ಸಿ.ಎಂ. ಹಾಸ್ಟೆಲ್ ನಲ್ಲಿ  ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ..   ತಕ್ಷಣ ಮನವಿಗೆ  ಸ್ಪಂದಿಸಿದ ತಹಸೀಲ್ದಾರ್ ರವರಿಗೆ ಅಭಿನಂದನೆಗಳನ್ನ ಸಿಐಟಿಯು ಇವರಿಗೆ ಶಾಸ್ವತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ.

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ ಮಂಡ್ಯ

https://www.youtube.com/watch?v=sWheqip4eUM
- Advertisement -

Latest Posts

Don't Miss