ಗದಗ: ಮೊದಲಿನಿಂದಲೂ ಮನುಷ್ಯ ಮತ್ತ ಪ್ರಾಣಿಗಳ ಮದ್ಯೆ ಅವಿನಾಭಾವ ಸಂಬಂದವನ್ನು ಹೊಂದಿದ್ದಾನೆ. ಅದರಲ್ಲೂ ಮನೆಯಲ್ಲಿ ಸಾಕುಪ್ರಾಣಿಗಳಾದ ಬೆಕ್ಕು ನಾಯಿಗಳಂತೂ ದೊಡ್ಡವರಿಗೆ ಮಾತ್ರವಲ್ಲದೆ ಚಿಕ್ಕಮಕ್ಕಳಿಗೂ ಪ್ರೀತಿ ಎಂದರೆ ತಪ್ಪಾಗಲಾರದು. ಆದರೆ ಅದೇ ಬೆಕ್ಕುಗಳು ಇಡಿ ಕುಟಂಬದ ಪ್ರಾಣವನ್ನು ಉಳಿಸಿವೆ ಎಂದರೆ ನಂಬುತ್ತೀರಾ.
ನಾವು ಹೇಳುತ್ತಿರುವ ಸ್ಟೋರಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಅಂಬೇಡ್ಕ್ ನಗರದಲ್ಲಿ ಲಕ್ಷ್ಮಣ ಚೆಲುವಾದಿ ಎನ್ನುವವರು ಕುಟುಂಬವನ್ನು ರಕ್ಷಿಸಿದೆ.
ಕುಟಂಬಸ್ತರೆಲ್ಲರು ಹೊರಗಡೆ ಹೋಗಿದ್ದಾರೆ ಆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನಾಗರ ಹಾವೊಂದು ಮನೆಯ ಅಡುಗೆ ಮನೆಗೆ ಸೇರಿಕೊಂಡಿದೆ. ಹಾವು ಹೋಗುವುದನ್ನು ಮನೆಯಲ್ಲಿ ಸಾಕಿದ ಬೆಕ್ಕುಗಳು ನೋಡಿ ಅಡುಗೆ ಮನೆಯ ಬಾಗಿಲಿಗೆ ಅಡ್ಡಲಾಗಿ ನಿಂತಿವೆ ಅದೇ ವೇಳೆಯಲ್ಲಿ ಮನೆಗೆ ಬಂದ ಕುಟುಂಬಸ್ಥರು ಬೆಕ್ಕುಗಳ ವರ್ತನೆ ಮನೆಯವರಿಗೆ ಅನುಮಾನ ಉಂಟಾಗಿದೆ. ನಂತರ ಅನುಮಾನಗೊಂಡು ಮನೆಯವರು ಮನೆಯನ್ನು ಸೂಕ್ಷ್ಮವಾಗಿ ನೋಡಿದ್ದಾರೆ ನಂತರ ಅಡುಗೆ ಮನೆಯಲ್ಲಿ ಹಾವು ಸೇರಿಕೊಂಡಿರುವುದು ಪತ್ತೆಯಾಗಿದೆ.
ತಕ್ಷಣ ಉರಗ ರಕ್ಷಕ ಸೂರ್ಯ ಬಾನ್ ಅವರನ್ನು ಕರೆಸಿ ಮನೆಯಲ್ಲಿರುವ ಹಾವನ್ನು ಹೊರತೆಗೆದು ಹಾವನ್ನು ರಕ್ಷಿಸಿದ್ದಾರೆ. ನೋಡಿದ್ರಲ್ಲಾ ಸ್ನೇಹಿತರೆ ನಾವು ಎಲ್ಲಿಗಾದರೂ ಹೋಗಬೇಕಾದರೆ ಬೆಕ್ಕು ಅಡ್ಡಬರಬಾರದು ಅಪಶಕುನ ಎನ್ನುತ್ತೇವೋ ಅದೇ ಬೆಕ್ಕು ಈಗ ಇಡಿ ಕುಟುಂಬಸ್ತರು ಪ್ರಾಣವನ್ನು ರಕ್ಷಿಸಿದೆ. ಅಸಲಿಗೆ ಬೆಕ್ಕು ಅಡ್ಡ ಬಂದರೆ ಅಪಶಕುನ ಅಂತೀವಿ ಆದರೆ ಅದು ನಮ್ಮ ಮೌಡ್ಯ. ಬದಲಿಗೆ ಬೆಕ್ಕು ಅಡ್ಡ ಬಂದರೆ ಮುಂದೆ ಸಂಭವಿಸಬಹುದಾದ ಅಪಾಯದ ಮುನ್ಸೂಚನೆ. ಅದು ನಮ್ಮ ಆಪ್ತ ರಕ್ಷಕ.
Grama Panchayath : ಶಿರಗುಪ್ಪಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ : ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ..!
UG NEET : ಯುಜಿನೀಟ್-2023: ಅರ್ಜಿ ಸಲ್ಲಿಸಲು ಇಂದು ಅಂತಿಮ ಅವಕಾಶ, ನಾಳೆ ದಾಖಲೆ ಪರಿಶೀಲನೆ
Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ