ಬೆಂಗಳೂರು : ಎಲೆಕ್ಷನ್ ಟೈಂನಲ್ಲಿ ಮನೆ ಬಾಗಿಲಿಗೆ ಹಣ ಹಂಚೋದು, ಸೀರೆ ಹಂಚೋದಲ್ಲ.. ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿರುವ ಜನಗಳಿಗೆ ನೆರವಾಗಿ.. ಈಗ ಬಂದು ಹಣ ಹಂಚಿ ಅಂತ ರಾಜಕಾರಣಿಗಳಿಗೆ ಟ್ರೋಲ್ ಪೇಜ್ ಗಳು ಹಾಗೂ ಮಾಧ್ಯಮಗಳು ಆಹ್ವಾನ ಕೊಟ್ಟಿದ್ರು.. ಇದಾದ ಮೇಲೆ ಒಂದಷ್ಟು ಜನ ಪ್ರತಿನಿಧಿಗಳು ಬೆಳಗ್ಗೆ ಬ್ರೇಕ್ ಫಾಸ್ಟ್ ಪ್ಯಾಕೇಗಳನ್ನ ವಿತರಣೆ ಮಾಡಿ ಫೇಸ್ ಬುಕ್ ಗೆ ಫೋಟೋ ಹಾಕಿದ್ರು.. ಒಂದಷ್ಟು ಒಂದೆರಡು ಕೆಜಿ ಅಕ್ಕಿ ಬೇಳೆ ನೀಡಿ ಬೆನ್ನು ತಟ್ಟಿಕೊಂಡಿದ್ರು.. ಮೊದಲ ವಾರ ಕೊಟ್ಟ ಜನ ಹೀಗೆ ಮನೆ ಸೇರಿಕೊಂಡಿದ್ದಾರೆ.. ಆರ್.ಆರ್ ನಗರ ಮಾಜಿ ಶಾಸಕ ಮುನಿರತ್ನ ಪ್ರತಿ ದಿನ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡ್ತಿದ್ರು.. ಆದ್ರೆ ಮಧ್ಯಮ ವರ್ಗದ ಜನ , ಮಹಿಳೆಯರು, ಮಕ್ಕಳು ಬಂದು ಊಟ ಮಾಡಲು ಮುಜುಗರ ಅನುಭವಿಸುತ್ತಿದ್ದಾರೆ ಅನ್ನೋದನ್ನ ತಿಳಿದ ಮುನಿರತ್ನ ಇದೀಗ ನಾಳೆ ಭಾನುವಾರ 1 ಲಕ್ಷ ಕುಟುಂಬಗಳಿಗೆ ಒಂದು ತಿಂಗಳ ದಿನಸಿ ನೀಡಲು ಮುಂದಾಗಿದ್ದಾರೆ..
ಮುನಿರತ್ನ ಏನ್ ಕೊಡ್ತಿದ್ದಾರೆ..? ಎಷ್ಟು ಕೊಡ್ತಿದ್ದಾರೆ..?
25 ಕೆಜಿ ಅಕ್ಕಿ
2 ಕೆಜಿ ತೊಗರಿ ಬೆಳೆ
2 ಕೆಜಿ ಸಕ್ಕರೆ
1 ಕೆಜಿ ಉಪ್ಪು
1 ಡೆಟಾಲ್ ಸೋಪು
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಾರ್ಡ್ ನವರಿಗೆ ಎಲ್ ಸಿ ಆರ್ ಸ್ಕೂಲ್ ಬಳಿ, ಜೆ.ಪಿ ಪಾರ್ಕ್ ಬಳಿ ಹಾಗೂ ಜಾಲಹಳ್ಳಿ ವಿಲೇಜ್ ನಜನರಿಗೆ ಸರ್ಕಾರಿ ಶಾಲೆಯ ಬಳಿ ದಿನಸಿಯನ್ನ ವಿತರಣೆ ಮಾಡಲಿದ್ದಾರೆ..
ಇದೀಗ ಮತ್ತೆ ಲಾಕ್ ಡೌನ್ ಕಂಟಿನ್ಯೂ ಆಗಲಿದ್ದು ಇನ್ನು 20 ದಿನಕ್ಕೆ ಆಹಾರ ಯಾರು ಕೊಡ್ತಾರೆ ಅನ್ನುವ ಆತಂಕ ಕೂಲಿಕಾರ್ಮಿಕರು, ಮಧ್ಯಮವರ್ಗದವರಲ್ಲಿ ಇದೆ.. ಮುನಿರತ್ನ ರೀತಿಯೇ ಉಳಿದ ಶಾಸಕರು, ರಾಜಕೀಯ ನಾಯಕರು ಜನರ ನೆರವಿಗೆ ಬಂದ್ರೆ ಅನುಕೂಲವಾಗುತ್ತೆ.. ನೀವೂ ಆರ್.ಆರ್ ನಗರ ವ್ಯಾಪ್ತಿಯ ಜನರಾದರೆ ತಪ್ಪದೇ ಭಾನುವಾರ ದಿನಸಿ ಪಡೆದುಕೊಳ್ಳಿ
ಕರ್ನಾಟಕ ಟಿವಿ, ಬೆಂಗಳೂರು