Thursday, August 21, 2025

Latest Posts

Student : ಖರ್ಚಿಗೆ ಹಣ ನೀಡಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿ

- Advertisement -

Manglore News : ಮಂಗಳೂರು ನಗರದ ಕೆಪಿಟಿಯಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಗೆ ಸೇರ್ಪಡೆಗೊಂಡ ಮೊದಲ ದಿನವೇ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಕುತ್ತಾರ್ ಸುಭಾಷನಗರದಲ್ಲಿ ಈ  ಘಟನೆ  ನಡೆದಿದ್ದು ಸುಭಾಷನಗರದ ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬುವರ ಪುತ್ರ ಸುಶಾಂತ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಹೇಳಲಾಗಿದೆ.

ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ನಡೆಸುವ ಆಸಕ್ತಿ ವಹಿಸಿದ್ದರಿಂದ ಹೆತ್ತವರು ಆ.2 ರಂದು ಕಾಲೇಜಿಗೆ  ಸೇರಿಸಿದ್ದಾರೆ‌ . ಈ ವೇಳೆ ರೂ.500 ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಬೆಳಿಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ. 500 ಕೊಡುವಂತೆ ಕೇಳಿದಾಗ ನೀಡಿರಲಿಲ್ಲ.

ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಸುಶಾಂತ್ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭ ಕೋಣೆಯೊಳಗೆ ಪಕ್ಕಾಸಿಗೆ ಅಂದರೆ ಮರದ ಜಂತಿಗೆ  ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Train : ರೈಲಿಗೂ ಹುಟ್ಟು ಹಬ್ಬದ ಸಂಭ್ರಮ..! ಅಲಂಕಾರಗೊಂಡ ರೈಲು …!

Cat Snake: ಹಾವಿನಿಂದ ಕುಟುಂಬವನ್ನು ರಕ್ಷಿಸಿದ ಬೆಕ್ಕು

Narendra Modi : ಮಂಗಳೂರು: ಆಗಸ್ಟ್ 6ರಂದು ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಪ್ರಧಾನಿಯವರಿಂದ ಶಿಲಾನ್ಯಾಸ

- Advertisement -

Latest Posts

Don't Miss