ಹುಬ್ಬಳ್ಳಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ಹೊಸಪೇಟೆ, ವಿಜಯ ನಗರ ಜಿಲ್ಲೆ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್ ಫೇರ್ ಆರ್ಗನೈಜೇಶನ್ (ರಿ) ನವದೆಹಲಿ ಸಹಯೋಗದಲ್ಲಿ ಶಾಮಿಯಾನ ಸಪ್ಲೈಯರ್ ಅಸೋಸಿಯೇಷನ್ (ರಿ), ಹುಬ್ಬಳ್ಳಿ ವತಿಯಿಂದ ‘ಶೃಂಗಾರ್ 2 ನೇ ಮಹಾಧಿವೇಶನ’ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ ವನ್ನು ಅಗಸ್ಟ್ 5 ರಿಂದ 7 ರವರೆಗೆ ಇಲ್ಲಿನ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದಿ. ೫ ರಂದು ಬೆ. ೧೧ ಗಂಟೆಯಿಂದ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನಾ ಸಮಾರಂಭ ಹಾಗೂ ಮಳಿಗೆಗಳ ವೀಕ್ಷಣೆ ಇರಲಿದ್ದು, ಅಂದು ಸಾನಿಧ್ಯವನ್ನು ಮೂರುಸಾವಿರಮಠದ ಶ್ರೀ ಡಾ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ಪೀರ್ ಸೈಯದ್ ತಾಜುದ್ಧೀನ್ ಖಾದ್ರಿ ಜಿಲಾನಿ ಸಜ್ಜದ್, ಮುಸ್ಲಿಂ ಧರ್ಮಗುರುಗಳು, ಹುಬ್ಬಳ್ಳಿ ಪಾಸ್ಟರ್ ಜೇಮ್ಸ್ ತಾಲಪಟಿ, ಕ್ರೈಸ್ತ ಧರ್ಮ ಗುರುಗಳು ವಹಿಸಲಿದ್ದು, ಕೇಂದ್ರ ಸಚಿವಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ವಿ.ಪ. ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ವೀಣಾ ಬರದ್ವಾಡ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಕೆ.ಡಿ.ಡಬ್ಲ್ಯೂ.ಓ ದ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ ಮಾನಕರ ಹಾಗೂ ಸಂಘದ ಅಧ್ಯಕ್ಷರಾದ ಕೆ. ನರಸಿಂಹಮೂರ್ತಿ, ಎ.ಐ.ಡಿ.ಡಬ್ಲ್ಯೂ.ಓ ಚೇರ್ಮನ್ ಜಿ. ಪೂರ್ಣಚಂದ್ರರಾವ್ ಉದ್ಘಾಟನೆ ನೆರವೇರಿಸಲಿದ್ದಾರೆಂದರು.
ದಿ. ೬ ರಂದು ನಡೆಯುವ ಸಂಘದ ಕಾರ್ಯ ಚಟುವಟಿಕೆಗಳು, ವಸ್ತು ಪ್ರದರ್ಶನ ಮಳಿಗೆ ವೀಕ್ಷಣೆ ಹಾಗೂ ಮುಂಬಯಿ ಕಲಾವಿದರ ತಂಡದಿಂದ ಮನರಂಜನೆ ಇರಲಿದ್ದು, ಜಿಲ್ಲಾ ಸಚಿವರಾದ ಸಂತೋಷ್ ಲಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ, ಎನ್.ಹೆಚ್. ಕೋನರಡ್ಡಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ.
ದಿ. ೭ ರಂದು ನಡೆಯುವ ಸಮಾರೋಪ ಸಮಾರಂಭ, ಅತಿಥಿಗಳಿಗೆ, ವಸ್ತು ಪ್ರದರ್ಶನ ಮಳಿಗೆದಾರರಿಗೆ, ಆಯೋಜಕರಿಗೆ ಸನ್ಮಾನ ಮತ್ತು ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ. ಪೂರ್ಣಚಂದ್ರರಾವ್, ಸೋಮಶೇಖರ್, ಜಿ. ಶ್ರೀನಿವಾಸ, ಗಂಗಾಧರ ದುಬೆ, ರವಿ ಶೆಟ್ಟಿ, ಮೋಹನ ಗಜಾಕೋಶ್ ಸೇರಿದಂತೆ ಉಪಸ್ಥಿತರಿದ್ದರು.
Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!
Narendra Modi : ಮಂಗಳೂರು: ಆಗಸ್ಟ್ 6ರಂದು ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಪ್ರಧಾನಿಯವರಿಂದ ಶಿಲಾನ್ಯಾಸ