Monday, December 23, 2024

Latest Posts

Viral video: ಕುಡಿದ ಮತ್ತಿನಲ್ಲಿ ಹೆಂಡತಿಗೆ ಹೊಡೆದು ಸಾರ್ವಜನಿಕರಿಂದ ಗೂಸಾ…!

- Advertisement -

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಹೆಂಡತಿಯ ಕೂದಲು ಹಿಡಿದು ರಸ್ತೆಯಲ್ಲೇ ಥಳಿಸಿ ಬಳಿಕ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು..ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರ ಬಳಿ ಕುಡಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡತಿಯನ್ನು ನಡುರಸ್ತೆಯಲ್ಲೇ ಥಳಿಸುತ್ತಿದ್ದ. ಹೆಂಡತಿಯ ಕೂದಲು ಹಿಡಿದು ದರದರನೇ ಎಳೆದುಕೊಂಡು ಹೋಗಿ ಹಣ್ಣಿನ ಅಂಗಡಿ ಬಳಿ ನೆಲಕ್ಕೆ ಕೆಡವಿ ಮನ ಬಂದಂತೆ ಹೊಡೆಯುತ್ತಿದ್ದ ಇದೇ ವೇಳೆ ಕೂಗಾಟ ಚೀರಾಟಕ್ಕೆ ಜನ ಸೇರಿದ್ದಾರೆ. ಜನ ಸೇರಿದ್ದಕ್ಕೆ ಕುಪಿತಗೊಂಡ ಕುಡಕ ಸಾರ್ವಜನಿಕರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇನ್ನೂ ಕುಡಕನ ಅವಾಂತರಕ್ಕೆ ರೊಚ್ಚಿಗೆದ್ದ ಹಾದಿಹೋಕನೊಬ್ಬ ಕುಡಕನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾನೆ. ಆಶ್ಚರ್ಯ ಅಂದ್ರೆ ಹಾದಿಹೋಕ ಕುಡುಕನಿಗೆ ಥಳಿಸುತ್ತಿದ್ದಾಗ ಈ ಮೊದಲು ಗಂಡನಿಂದ ಹೊಡೆತ ತಿಂದ ಹೆಂಡತಿ ಪತಿಗೆ ಬೀಳುತ್ತಿದ್ದ ಹೊಡೆತಗಳನ್ನು ತಡೆಯಲು ಹಾದಿಹೋಕನಿಗೆ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಅಲ್ಲದೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು. ಸ್ಥಳದಲ್ಲೇ ತಾಯಿ ಕೂಡಾ ಮಗನನ್ನು ಹಾದಿಹೋಕನಿಂದ ರಕ್ಷಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡು ಬಂತು. ಇದೆಲ್ಲ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

Hubli ಬಿಜೆಪಿ 9 ವರ್ಷಗಳಿಂದ ಸುಳ್ಳು ಹೇಳ್ತಾ ಬಂದಿದೆ…! ಸಲೀಂ ಅಹ್ಮದ್ ಹೇಳಿಕೆ‌.

Shivaraj Tangadagi: ಆರಗ‌ ಜ್ಞಾನೇಂದ್ರರನ್ನು ಜೈಲಿಗಟ್ಟಬೇಕು…!

Laxmi hebbalkar ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

- Advertisement -

Latest Posts

Don't Miss