ಸಿನಿಮಾ ಸುದ್ದಿ: ಮಲಯಾಳಂ ಚಿತ್ರ ನಿರ್ಮಾಪಕ ಸಿದ್ದಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 7, 2023 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿರ್ದೇಶಕರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿತ್ರ ನಿರ್ಮಾಪಕ ಸದ್ಯ ಕೊಚ್ಚಿ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಿಕ್ 1989 ರಲ್ಲಿ ಮಲಯಾಳಂ ಚಲನಚಿತ್ರ ‘ರಾಮ್‌ಜಿ ರಾವ್ ಸ್ಪೀಕಿಂಗ್’ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರು 1986 ರಲ್ಲಿ ಮಲಯಾಳಂ ಚಿತ್ರ ‘ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್’ ಮೂಲಕ ಚಿತ್ರಕಥೆಗಾರರಾಗಿ ಪಾದಾರ್ಪಣೆ ಮಾಡಿದರು. ಅವರ ಕೊನೆಯ ಚಿತ್ರ ‘ಬಿಗ್ ಬ್ರದರ್’.
ಮಾಧ್ಯಮ ವರದಿಯ ಪ್ರಕಾರ, ಸಿದ್ದಿಕ್ ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು ನಂತರ ನಿರಂತರವಾಗಿ ಚಿಕಿತ್ಸೆ ಪಡೆತ್ತಿದ್ದರು ಚಿಕಿತ್ಸೆಯ ಹೊರತಾಗಿಯೂ, ಚಲನಚಿತ್ರ ನಿರ್ಮಾಪಕರು ಹೃದಯಾಘಾತದಿಂದ ಬಳಲುತ್ತಿದ್ದರು. ಸದ್ಯ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಸಿದ್ದಿಕ್ ಪ್ರಸ್ತುತ ಎಕ್ಸ್‌ಟ್ರಾ ಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಯಂತ್ರದ ಮೂಲಕ ಆಕ್ಸಿಜನ್ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
Megha Shetty : ಆಪರೇಷನ್ ಲಂಡನ್ ಕೆಫೆ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಮೇಘಾ ಶೆಟ್ಟಿ!
Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!