ಧಾರವಾಡ;ಸಾರ್ವಜನಿಕರ ಗಮನ ಸೇಳೆದ ವಿದ್ಯಾರ್ಥಿಗಳ ಮಲ್ಲಕಂಬ: ಸ್ವಾತಂತ್ರ್ಯ ದಿನೋತ್ಸವದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರರ್ದಶಿಸಿದ ಮಲ್ಲಕಂಬ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು.
ಶಾಲೆಯ ಶಿಕ್ಷಕ ಸಿದ್ದಾರೂಡ ಹೂಗಾರ ಅವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ವಿವಿಧ ಬಂಗಿಯ ಮಲ್ಲಕಂಬದ ಕಸರತ್ತುಗಳನ್ನು ಪ್ರದರ್ಶಿಸಿದರು. ಈಗಾಗಲೇ ಸುಮಾರು ಎಂಟು ದೇಶಗಳಲ್ಲಿ ಮಲ್ಲಕಂಬ ಪ್ರದರ್ಶಿಸಿರುವ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪ್ರದರ್ಶನ ಸ್ಥಳಕ್ಕೆ ತೆರಳಿ ಶುಭ ಹಾರೈಸಿದರು ಮತ್ತು ಮಲ್ಲಕಂಬದ ಸುಧಾರಿತ ಪರಿಕರಗಳನ್ನು ನೀಡುವ ಭರವಸೆ ನೀಡಿದರು. ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ನಾಗರಾಜ ಪಾಟೀಲ್ ಮತ್ತು 2ನೇ ಪರೇಡ್ ಕಮಾಂಡರ್ ಕೆ.ಎಫ್.ಹದ್ದಣ್ಣವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಸ್.ಬಿ.ನಾಯಕ, ಗೃಹ ರಕ್ಷಕ ದಳದ ವಾದಿರಾಜ ದೇಶಪಾಂಡೆ, ಸೀನಿಯರ್ ಎನ್.ಸಿ.ಸಿ ಕೆಡೇಟ್ ಆದರ್ಶ ಎನ್.ಪಾಟೀಲ್, ಅಬಕಾರಿ ಇಲಾಖೆಯ ಶಬ್ಬೀರ ಜಮಾದರ, ಅಗ್ನಿಶಾಮಕ ಇಲಾಖೆಯ ಅರ್ಜುನ್ ವಿ.ಮಾನೆ, ಅರಣ್ಯ ಇಲಾಖೆಯ ಸಂತೋಷ ಕುಮಾರ ಎಂ.ಜಿ, 24 ಕರ್ನಾಟಕ ಎನ್.ಸಿ.ಸಿ. ಯು.ಪಿ.ಎಸ್.ಸಿ.ಶಾಲೆಯ ಸಂಜಯ ವನಹಳ್ಳಿ, 5 ಕರ್ನಾಟಕ ಗಲ್ರ್ಸ್ ಎನ್.ಸಿ.ಸಿ ಕಮಾಂಡರ್ ಸ್ನೇಹ ನಿಡಗುಂದಿ, ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೆÇಲೀಸ್ ಮಕ್ಕಳ ವಸತಿ ಶಾಲೆಯ ಶ್ರೇಯಸ್ ಹೊಸಮನಿ, ಭಾರತ ಸೇವಾದಳದ ಪ್ರಜ್ವಲಗೌಡ ಪಾಟೀಲ, ಆದರ್ಶ ವಿದ್ಯಾಲಯದ ವಿದ್ಯಾಶ್ರೀ ಬೆಳವಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ದ ಮೇಘನಾ ಕುಪ್ಪೆಲೂರು ನೇತೃತ್ವದ ತಂಡಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದವು. ಡಿಎಆರ್‍ದ ಎಆರ್‍ಎಸ್‍ಐ ವೈ.ಎಫ್.ಭಜಂತ್ರಿ ಹಾಗೂ ಸ್ಟಿಕ್ ಮೇಜರ್ ಸಾಗರ ಬಸರಿಕೊಡಿ ಅವರ ಆರ್ಕಷಕ ಪೊಲೀಸ್ ವಾದ್ಯ ವೃಂದವು ಪಥ ಸಂಚಲನಕೆ ಸುಮಧುರು ಸಂಗೀತ ನೀಡಿತು.
Santosh lad: ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವ ಷಡ್ಯಂತ್ರ ಮಾಡ್ತಾರೆ.
Jagadish Shetter: ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರಕ್ಕೆ ತಿರುಗೇಟು ನೀಡಿದ ಶೆಟ್ಟರ್