Monday, December 23, 2024

Latest Posts

ಬ್ಯಾಟರಾಯನಪುರದಲ್ಲಿ ಕೃಷ್ಣಭೈರೇಗೌಡ ತಂಡಕ್ಕೆ ಬಿಗ್ ಸೆಲ್ಯೂಟ್

- Advertisement -

ಕರ್ನಾಟಕ  ಟಿವಿ ಬೆಂಗಳೂರು : ಪ್ರಪಂಚದಲ್ಲಿ ಅಮೆರಿಕಾ ಸೇರಿದಂತೆ ಯುರೋಪ್ ರಾಷ್ಟ್ರಗಳನ್ನ ಸ್ಮಶಾನ ಮಾಡಿಬಿಟ್ಟಿದೆ. ಆದ್ರೆ, ಭಾರತದಲ್ಲಿ ಕೊರೋನಾಗಿಂತ ಲಾಕ್ ಡೌನ್ ನಿಂದಾಗಿ ಜನ ಒದ್ದಾಡುವಂತಾಗಿದೆ. ಹಸಿವು ನೀಗಿಸಲು ಪರದಾಡುವಂತಾಗಿದೆ. ಸಾವಿರಾರು ಸಂಸ್ಥೆಗಳು ಜನರಿಗೆ ಸಹಾಯ ಮಾಡ್ತಿವೆ. ಕೆಲ ರಾಜಕಾರಣಿಗಳು ಪ್ರಾಮಾಣೀಕವಾಗಿ ಕೆಲಸ ಮಾಡ್ತಿದ್ದಾರೆ.. ಇದರಲ್ಲಿ ಕೃಷ್ಣಭೈರೇಗೌಡ ತಂಡ ಮಾಡ್ತಿರುವ ಕೆಲಸ ಮಾತ್ರ ಇತರರಿಗೂ ಮಾದರಿ..

ಮಾರುಕಟ್ಟೆಗೆ ವಸ್ತುಗಳನ್ನ ತರಲಾಗದೆ ಕಂಗಾಲಾಗಿರುವ ರೈತರ ಬಳಿಯೇ ತೆರಳಿ ಕೃಷ್ಣಭೈರೇಗೌಡ ತಂಡ ತರಕಾರಿ ಖರೀದಿ ಮಾಡ್ತಿದೆ. ಅದನ್ನ ಬ್ಯಾಟರಾಯನಪುರ ಕ್ಷೇತ್ರಕ್ಕೆ ತಂದು ಕುಟುಂಬಕ್ಕೆ ತಲಾ 5 ಕೆಜಿ ತರಕಾರಕಾರಿಯನ್ನ ವಿಂಗಡಣೆ ಮಾಡಿ  ಮನೆಮನೆಗೆ ನೀಡ್ತಿದ್ದಾರೆ.. ಇದುವರೆಗೂ ಅಗತ್ಯವಿರುವ 6000 ಮನೆಗಳಿಗೆ ತರಕಾರಿ ದಿನಸಿಯನ್ನ ತಲುಪಿಸಿದ್ದಾರೆ.. ಕೃಷ್ಣ ಭೈರೇಗೌಡ ಬೆಳಗ್ಗೆಯಿಂದ ರಾತ್ರಿವರೆಗೂ ತಮ್ಮ ತಂಡವನ್ನ ಕಟ್ಟಿಕೊಂಡು ಕೆಲಸ ಮಾಡ್ತಿದ್ದಾರೆ.. ಶಾಸಕರಿಗೆ ಸ್ಥಳೀಯ ನಾಯಕರು ಹಣಕಾಸಿನ ನೆರವು ನೀಡ್ತಿದ್ದಾರೆ.. ಶಾಸಕ ಕೃಷ್ಣಭೈರೇಗೌಡರ ಕಾರ್ಯ ವನ್ನ ಇತರರೂ ಪಾಲಿಸಿದ್ರೆ ಗ್ರಾಮೀಣ ಭಾಗದ ರೈತರು ನಗರ ಭಾಗದ ಜನರಿಗೆ ಅನುಕೂಲವಾಗಲಿದೆ.

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ  ಟಿವಿ

https://www.youtube.com/watch?v=V2KhbSLgWVw&t=7s
- Advertisement -

Latest Posts

Don't Miss