Film News : ಸ್ಪಂದನಾ ಅವರ ನಿಧನದಿಂದ ವಿಜಯ್ ರಾಘವೇಂದ್ರ ಕುಟುಂಬದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಸ್ಯಾಂಡಲ್ ವುಡ್ ಗೂ ಇದೊಂದು ತುಂಬಲಾರದ ನಷ್ಟವೂ ಹೌದು.
ಇಂದು (ಆಗಸ್ಟ್ 16) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಬಡ್ಡಿ ಕ್ಲಬ್ ಮೈದಾನದಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆಯುತ್ತಿದೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು ವಿಜಯ್ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ. ಅಂದಾಜು 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗಿದೆ.
‘ಸ್ಪಂದನಾ ಮಿತಭಾಷಿ, ಒಳ್ಳೆ ಹುಡುಗಿ. ಹೀಗೆ ಆಗಿರೋದು ನಂಬೋಕ್ಕೆ ಆಗ್ತಿಲ್ಲಾ’
Spandana vijay Raghavendra: ಇಂದು ಮದ್ಯ ರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ




