Monday, December 23, 2024

Latest Posts

Pramod mutalik: ಪೊಲೀಸರ ನಿರ್ಲಕ್ಷ್ಯ ಮತ್ತು ಸಗಣಿ ತಿನ್ನುವ ಬುದ್ದಿಯಿಂದ ಸೌಜನ್ಯ ಪ್ರಕರಣ ಸರಿಯಾಗಿ ತನಿಖೆ ಆಗಿಲ್ಲ..!

- Advertisement -

ಜಿಲ್ಲಾಸುದ್ದಿಗಳು: ಸೌಜನ್ಯ ಸಾವಿನ ಪ್ರಕರಣಕ್ಕೆ ನ್ಯಾಯ ದೊರಕಿಸಿ ಕೊಡಲು ಸಾಕಷ್ಟು ಹೋರಾಟಗಳು ನಡೆಸಿ ರಾಜ್ಯದ ಜನತೆ ಮರು ತನಿಖೆ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಾಯ ಹೇರುತ್ತಿವೆ ಈಗ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು  ಪೊಲೀಸರ ನಿರ್ಲಕ್ಷ್ಯ ಮತ್ತು ಸಗಣಿ ತಿನ್ನುವ ಬುದ್ದಿಯಿಂದ ಸೌಜನ್ಯ ಪ್ರಕರಣ ಸರಿಯಾಗಿ ತನಿಖೆ ಆಗಿಲ್ಲ ಅಂತ ಆರೋಪಿಸಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,ಮುರುಡೇಶ್ವರದಲ್ಲಿ 2010 ರಲ್ಲಿ ಯಮುನಾ ನಾಯಕ್ ಎಂಬ ಮಹಿಳೆ ಮುಸ್ಲಿಂ ಮನೆಗೆ ಕೆಲಸಕ್ಕೆ ಹೋಗಿದ್ದಳು,ಈ ವೇಳೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು..ಪ್ರಕರಣದಲ್ಲಿ ವೆಂಕಟೇಶ ಹರಿಕಾಂತ ಎಂಬುವಾತನನ್ನು ಬಂಧನ ಮಾಡಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್‌ ಯಾವುದೇ ಸಾಕ್ಷಿ ಇಲ್ಲ ವೆಂಕಟೇಶನನ್ನು ಬಿಡುಗಡೆ ಮಾಡಿತ್ತು.ಇಂತಹ ಘಟನೆ ಸೌಜನ್ಯ ಪ್ರಕರಣದಲ್ಲಿ ನಡೆದಿದೆ.

ಸಂತೋಷ ನಿರ್ದೋಷಿ ಆಗಿದ್ದಾರೆ ಆದರೆ ಇನ್ನೂಳಿದವರು ಯಾರು?.ಪ್ರಕರಣದ ಪ್ರಮುಖ ಆರೋಪಗಳು ಯಾರು? ಎಂದು ಪ್ರಶ್ನೆ ಮಾಡಿದ ಅವರು,ಸೌಜನ್ಯ ಮನೆಯಿಂದ ಕಾಲೇಜಿಗೆ ಹೋಗುವಾಗ ಉಪವಾಸದಿಂದ ಹೋಗಿದ್ದಳು..ಆದರೆ ಪೊಸ್ಟ್ ಮಾಟಂ ನಲ್ಲಿ ಸೌಜನ್ಯ ಹೊಟ್ಟೆಯಲ್ಲಿ ಅಜೀರ್ಣ ಆಹಾರ ಇತ್ತು ಅಂತ ವರದಿಯಿದೆ ಇದು ಏನು ಯಾವ ಆಹಾರ ವಿಷ ನಾ ಅಂತ ಸ್ಪಷ್ಟಪಡಿಸಿಲ್ಲ.ಸೌಜನ್ಯ ಶವ ಸಿಕ್ಕಾಗ ಮಳೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಆದರೆ ಆಕೆಯ ಪಠ್ಯ ಪುಸ್ತಕ ನೆನದಿರಲಿಲ್ಲ. ಸೌಜನ್ಯ ಮನೆಗೆ ಬಂದು ಆಕೆಯ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಲಾಗಿದೆ ಈ ಎಲ್ಲಾ ಅಂಶಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ..ಇನ್ನೂ ಧರ್ಮ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆನೆಯ ಮಾವುತ ಮತ್ತು ಮಗಳನ್ನು ಹತ್ಯೆ ಮಾಡಲಾಗಿದೆ.ಈ ಬಗ್ಗೆ ಮಾವುತನ ಹೆಂಡತಿ ದೂರು ದಾಖಲಿಸಿದ್ರೆ ಇಲ್ಲಿಯ ತನಕ ಯಾವುದೇ ತನಿಖೆ ಆಗಿಲ್ಲ ಇದಕ್ಕೆಲ್ಲಾ ಸರ್ಕಾರ ನಿರ್ಲಕ್ಷ್ಯ ಧೋರಣೆ ಕಾರಣ..

ಸಂತೋಷ ರಾವ್ ಕುಟುಂಬ ಸಾಕಷ್ಟು ಸಂಕಷ್ಟದಲ್ಲಿದೆ ಮನೆಗೆ 25 ಲಕ್ಷ ಪರಿಹಾರ ನೀಡಬೇಕು.ಸೌಜನ್ಯ ಕುಟುಂಬಸ್ಥರಿಗೆ ಜೀವ ಬೆದರಿಕೆ ಹೀಗಾಗಿ ಸೂಕ್ತ ರಕ್ಷಣೆ ನೀಡಬೇಕು.ಸೌಜನ್ಯಗೆ ನ್ಯಾಯ ಸಿಗುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ.ಸೌಜನ್ಯ ತಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ಹೋರಾಟ ಆರಂಭ ಮಾಡಲಾಗುತ್ತಿದೆಂದರು.

Reporter: Sangamesh sattigeri

Panchamasali Raservation: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ :ಜಯ ಮೃತ್ಯುಂಜಯ ಸ್ವಾಮೀಜಿ

Karnataka Lokayukta :ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

Shakthi Yojane: ಉಚಿತ ಬಸ್ ಪ್ರಯಾಣ ಯೋಜನೆ ಕೈಬಿಡುವ ವದಂತಿಗಳಿಗೆ ಸಚಿವರ ಕಿಡಿ..!

- Advertisement -

Latest Posts

Don't Miss