ಹುಬ್ಬಳ್ಳಿ: ಬೆಣ್ಣೆಹಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಸೆಪ್ಟೆಂಬರ್ ೩ ರಂದು ರವಿವಾರ ಬೆ.೧೦ ಗಂಟೆಗೆ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೂತನ ಸಚಿವರು, ಶಾಸಕರಿಗೆ ಸನ್ಮಾನ ಹಾಗೂ ಬೆಣ್ಣಿಹಳ್ಳದ ಶಾಶ್ವತ ಪರಿಹಾರ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಣ್ಣಿಹಳ್ಳ ಸಂರಕ್ಷಣಾ ಸಮಿತಿಯ ಪ್ರದಾನ ಕಾರ್ಯದರ್ಶಿ ಡಾ. ತಾಜುದ್ದೀನ ಮುಲ್ಲಾನವರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಣ್ಣಿಹಳ್ಳ ಮತ್ತು ರಾಡಿಹಳ್ಳಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದು, ಅದರ ಕುರಿತಂತೆ ಈ ಚಿಂತನ ಮಂಥನ ಕಾರ್ಯಕ್ರಮವನ್ನು ದಿಂಗಾಲೇಶ್ವರ ಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯಲಿದೆ.
ಸಚಿವರಾದ ಎಚ್.ಕೆ.ಪಾಟೀಲ್, ಸಂತೋಷ ಲಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿ.ಪ. ಸದಸ್ಯ ಸಲೀಂ ಅಹ್ಮದ್, ಶಾಸಕರಾದ ಎನ್.ಎಚ್.ಕೋನರಡ್ಡಿ, ಎಂ.ಆರ್.ಪಾಟೀಲ್, ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಸೇರಿದಂತೆ ಮೊದಲಾದ ಗಣ್ಯರು ಆಗಮಿಸಲಿದ್ದಾರೆ.
ಚಿಂತನ-ಮಂಥನ ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ರೈತರು ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕಿರಣ್ ರಡ್ಡೇರ್, ಚಂದ್ರಶೇಖರ ಸೋಮರಡ್ಡಿ, ಜಗದೇವಯ್ಯ ಶಾಸ್ತ್ರಿ ಸೇರಿದಂತೆ ಉಪಸ್ಥಿತರಿದ್ದರು.
United Kingdom: ಆಸ್ಪತ್ರೆಯಲ್ಲಿ ಶಿಶುಗಳನ್ನು ಕೊಲ್ಲುತ್ತಿದ್ದ ನರ್ಸಗಳನ್ನು ಕಂಡು ಹಿಡಿದ ಭಾರತೀಯ ಮೂಲದ ವೈದ್ಯರು..!

