ಧಾರವಾಡ; ಶ್ರಾವಣ ಬಂದ್ರೆ ಸಾಕು ಸಾಲು ಸಾಲು ಹಬ್ಬಗಳ ಆರಂಭದ ಮಾಸವಾಗಿದೆ. ಅದರಲ್ಲಿಯೂ ಈ ಶ್ರಾವಣದಲ್ಲಿ ಮೊದಲಿನೇ ಹಬ್ಬವೇ ನಾಗರ ಪಂಚಮಿ. ನಾಗ ದೇವರ ಪೂಜೆಯ ಜೊತೆಗೆ ಜೋಕಾಲಿಯಾಟ, ಬಗೆಬಗೆಯ ಉಂಡಿ, ಚಕ್ಕುಲಿ ಸವೆಯುವ ಸಂಭ್ರಮ. ಆದರೆ ಈ ಸಂಭ್ರಮ ಈಗ ಕಾಣೆಯಾಗಿಯೇ ಹೋಗಿದೆ ಅನ್ನೋ ಮಾತು ಕೇಳಿ ಬರುತ್ತಿವೆ. ಆದ್ರೆ ಧಾರವಾಡದಲ್ಲಿ ಮಹಿಳೆಯರ ತಂಡವೊಂದು ಗ್ರಾಮೀಣ ಸೊಗಡಿನಲ್ಲೇ ಪಂಚಮಿ ಮಾಡಿ ಸಂಭ್ರಮಿಸಿದ್ದಾರೆ.
ಶೇಂಗಾ ಉಂಡೆ, ರವೆ ಉಂಡೆ, ಎಳ್ಳುಂಡೆ, ಬೇಸನ್, ಅಳ್ಳು, ಕೊಬ್ಬರಿ ಉಂಡೆ – ಒಂದಾ… ಎರಡಾ… ಅದರೊಂದಿಗೆ ಚಕ್ಕಲಿ-ಕೋಡು ಬಳೆಗಳ ಸೊಗಸು, ಇತ್ತ ಮರಕ್ಕೆ ಕಟ್ಟಿದ ದೊಡ್ಡ ಜೋಕಾಲಿಯಲ್ಲಿ ಜೀಕುತ್ತಿರೋ ಮಹಿಳೆಯರು. ಮಕ್ಕಳ ಉತ್ಸಾಹ. ಇದು ಧಾರವಾಡದಲ್ಲಿ ಜಾನಪದ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಜಾನಪದ ಪಂಚಮಿಯ ಝಲಕ್. ಪಂಚಮಿಯನ್ನು ಉಂಡೆ ಹಬ್ಬವನ್ನಾಗಿ ಆಚರಿಸೋ ಪದ್ಧತಿ ಬಹಳ ಹಳೆಯದ್ದು. ವಾತಾವರಣದಲ್ಲಿ ಆದ ಬದಲಾವಣೆಗೆ ತಕ್ಕಂತೆ ಬಗೆ ಬಗೆಯ ಉಂಡೆಗಳನ್ನು ತಿನ್ನೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಹೊಸ ಸೇರೆಯುಟ್ಟ ಮಹಿಳೆಯರೆಲ್ಲ ತಮ್ಮ ತಮ್ಮ ಮನೆಗಳಿಂದ ಬಗೆ ಬಗೆಯ ಉಂಡೆಗಳನ್ನು ತೆಗೆದುಕೊಂಡು ಧಾರವಾಡದ ರಂಗಾಯಣ ಆವರಣದಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಹಳ್ಳಿ ಶೈಲಿಯ ಆಟಗಳನ್ನು ಆಡಿ ಜೋಕಾಲಿ ಆಡಿ ಖುಷಿ ಪಟ್ಟರು. ಬಳಿಕ ಕೃತಕ ಮಣ್ಣಿನ ನಾಗರಾಜನಿಗೆ ಹಾಲೆರೆದು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಮಿಯ ಜಾನಪದ ಶೈಲಿಯ ಹಾಡುಗಳನ್ನು ಹಾಡಿ, ಸಂಭ್ರಮಿಸಿದರು.
ಹಬ್ಬಗಳು ಬಂದರೆ ಸಾಕು ಎಲ್ಲರಲ್ಲಿ ಸಂಭ್ರಮ ಮಾಡಿರುತ್ತದೆ. ಅದರಲ್ಲೂ ಮಹಿಳೆಯರು ನಾಗರ ಪಂಚಮಿ ಹಬ್ಬವನ್ನು ಹೆಂಗೆಳೆಯರು ಸೇರಿ ಜೋಕಾಲಿ ಆಡಿ ಉಂಡಿ ತಿಂದ ಸಂಭ್ರಮಿಸುತ್ತಾರೆ. ಅಲ್ಲದೇ ಮದುವೆ ಆಗಿ ಗಂಡನ ಮನೆಗೆ ಹೋದ ಮಹಿಳೆಯರು ಸಹ ತವರು ಮನೆಗೆ ಹಬ್ಬಕ್ಕಾಗಿಯೇ ಬಂದು ನಾಗರ ಪಂಚಮಿ ಹಬ್ಬ ಆಚರಣೆ ಮಾಡುತ್ತಾರೆ. ಈ ಹಬ್ಬಕ್ಕಾಗಿ ವಾರದ ಮುಂಚಿತವಾಗಿ ಬಗೆಬಗೆಯ ಉಂಡೆಗಳನ್ನು ಕಟ್ಟುತ್ತಾರೆ. ಸಿಹಿಯಾ ಉಂಡೆ ಜೊತೆ ಚಕ್ಕಲಿ, ಕೋಡು ಬಳೆ ಸಹ ತಯಾರಿಸುತ್ತಾರೆ. ನಾಗ ದೇವರಿಗೆ ಹಾಲೆರು ಪಂಚಮಕ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಂಪ್ರದಾಯಿಕವಾಗಿ ಬಂದ ಹಬ್ಬಗಳ ಆಚರಣೆ ಸಹ ಕಡಿಮೆ ಆಗುತ್ತ ಬಂದಿದೆ. ಆದರೆ ನಾವೇಲ್ಲ ನಮ್ಮ ಹಿರಿಯರು ಆಚರಣೆ ಮಾಡುತ್ತ ಬಂದಿರೊ ಹಬ್ಬವನ್ನು ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ನಾವೆಲ್ಲ ಮಹಿಳೆಯರು ಸೇರಿ ನಾಗರ ಪಂಚಮಿ ಆಚರಣೆ ಮಾಡಿದ್ದೆವೆ.
ಒಟ್ಟಾರೆ ಪಂಚಮಿಯ ಸಂಭ್ರಮವನ್ನು ಧಾರವಾಡದ ಜನ ಹಳ್ಳಿಯ ಸೊಗಡು, ಜಾನಪದ ಶೈಲಿ ಹಾಗೂ ಧಾರ್ಮಿಕ ಪರಂಪರೆಯಡಿಯಲ್ಲಿ ಹಳೆಯದು ಯಾವುದನ್ನೂ ಬಿಡದಂತೆ ಆಚರಣೆ ಮಾಡಿದ್ದು ಶ್ಲಾಘನೀಯ ಕಾರ್ಯವೇ ಸರಿ.
Aadhar card : ನಾಯಕನಹಟ್ಟಿ ನಾಡಕಚೇರಿ ಆಧಾರ್ ನೊಂದಣಿಗೆ ಮುಗಿಬಿದ್ದ ಜನತೆ…
National education Policy : ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ