Monday, December 23, 2024

Latest Posts

Shivaraj Tangadagi “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ

- Advertisement -

ಹುಬ್ಬಳ್ಳಿ : ಧಾರವಾಡದಲ್ಲಿ ಹಿಂದುಳಿದ ವರ್ಗದ ಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ, ನವೆಂಬರ್ 1 ರಿಂದ ಒಂದು ವರ್ಷದ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಕರ್ನಾಟಕ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಅಂತ ಕರ್ನಾಟಕದಾದ್ಯಂತ ಸಭೆ  ನಡೆಸುತ್ತಿದ್ದೇವೆ. ಎಲ್ಲಾ ಸಾಹಿತಿ, ಹಿರಿಯರ ಬಳಿ ಸಲಹೆ ತೆಗೆದುಕೊಳ್ಳುತ್ತಿದ್ದೇವೆ ಅವರ ಸಲಹೆ ಮೇರೆಗೆ 50 ವರ್ಷದ ‘ಸಂಭ್ರಮ ಕರ್ನಾಟಕ’ ಎಂದು ಆಚರಣೆ ಮಾಡಲು ನಿರ್ಧರಿಸಿದ್ದೇವೆ.

50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ ಕರ್ನಾಟಕ ಅಂತ ಮರುನಾಮಕರಣ ,ಮಾಡಿದ್ದು ಕಾಂಗ್ರೆಸ್ ಅಧಿಕಾರದ ಸಮಯದಲ್ಲಿ .50 ವರ್ಷದ ಸಂಭ್ರಮದಲ್ಲೂ ಕಾಂಗ್ರೆಸ್ ಆಡಳಿತ ಇದೆ ಮೈಸೂರು ಭಾಗದ ಜನ ಕರ್ನಾಟಕ ಅಂತ ಹೆಸರು ಇಡಲು ವಿರೋಧ ಮಾಡಿದ್ರೂ ದೇವರಾಜ ಅರಸು ಅವರು ಕರ್ನಾಟಕ ಅಮತ ನಾಮಕರಣ ಮಾಡಿದರು. 50 ವರ್ಷದ ಸಂಭ್ರಮದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನ್ನಾಗಿದ್ದು ಸಂತಸ ತಂದಿದೆ .

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರವಾಗಿ ಮಾತನಾಡಿದ ಸಚಿವರು: ತಮಿಳುನಾಡಿಗೆ ನೀರು ಬಿಡೋದು ಸುಪ್ರೀಂ ಕೋರ್ಟ್ ಆದೇಶ. ನಾವು ನ್ಯಾಯಲಯದ  ಮಾತು ಗೌರವಿಸಬೇಕು ಈ ಬಗ್ಗೆ 23 ಕ್ಕೆ ಸಭೆಯನ್ನು ಕರೆದಿದ್ದಾರೆ. ತಮಿಳುನಾಡಿಗೆ ನೀರು ಬಿಡೋದಕ್ಕೂ ಕನ್ನಡಕ್ಕೂ ವ್ಯತ್ಯಾಸ ಇದೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

ನಾವು ಕರ್ಕೋತೀವಿ ಅಂದ್ರೆ ಬಿಜೆಪಿ ಜೆಡಿಎಸ್ ನಲ್ಲಿ ಯಾರು ಇರೋದಿಲ್ಲ ದೇಶದ ಪ್ರಧಾನ ಮಂತ್ರಿ, ಗೃಹ ಮತ್ರಿ ಬೀದಿ ಬೀದಿ ಓಡಾಡಿದ್ರು 66 ಸೀಟ್ ಡಾಟಲಿಲ್ಲ 3 ತಿಂಗಳಲ್ಲಿ3 ಗ್ಯಾರೆಂಟಿ  ಈಡೇರಿಸಿದ್ದೇವೆ 4ನೇಯ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡ್ತಾ ಇದ್ದಿವಿ ಮುಂದಿನ ದಿನಗಳಲ್ಲಿ ಜನರು ಬಿಜೆಪಿಯನ್ನು ಮನೆಗೆ ಕಳಿಸ್ತಾರೆ ಬೇರೆ ಪಕ್ಷದವರು  ನಮ್ಮ ಸಿದ್ದಾಂತದಂತೆ ಬರೋದಾದ್ರೆ ಬರ್ಲಿ

ದ್ವೇಷ ರಾಜಕಾರಣ ಮಾಡಿದ್ದು ಬಿಜೆಪಿ ಅವರು 9 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಅವರು ಬಡವರ ಪರವಾಗಿರುವ ಒಂದೇ ಒಂದು ಯೋಜನೆ ಹೇಳಿ ಎಂದು ಪ್ರಶ್ನಿಸಿದರು. ಸಮಾಜದಲ್ಲಿ ವಿಷ ಬೀಜ ಬಿತ್ತಿ ಅಧಿಕಾರ ನಡೆಸ್ತಾ ಬಂದಿದ್ದಾರೆ  ನಮ್ಮ ಪಕ್ಷಕ್ಕೆ ಬರ್ತೀವಿ ಅನ್ನೋರನ್ನು ಸೇರಿಸಿಕೋಳ್ಳುವ ನಿರ್ಧಾರ ಮಾಡೋದು ಹೈಕಮಾಂಡ್ ಇನ್ನೊಬ್ಬರನ್ನು ಕರ್ಕೊಂಡು ಸರ್ಕಾರ ಮಾಡೋದು ನಮಗೆ ಅವಶ್ಯಕತೆ ಇಲ್ಲಾ ಕಟುವಾಗಿ ನುಡಿದರು. ಆದ್ರೆ ಅವರು ನಮ್ಮ ಅಭಿವೃದ್ಧಿ ನೋಡಿ ಬರ್ತಾ ಇದ್ದಾರೆ ಅವರ ರಾಜಕೀಯ ಬೆಳವಣಿಗೆಗಾಗಿ ಬರ್ತಾ ಇದ್ದಾರೆ ನಮ್ಮ ಗ್ಯಾರೆಂಟಿಗಳಿಂದ ಯಾವ ಉತ್ಸವವನ್ನು ನಿಲ್ಲಿಸಲ್ಲ ಎಲ್ಲಾ ನಡೆಸುತೇವೆ ನಮ್ಮ ಎಲ್ಲಾ ಯೋಜನೆಗಳಿಂದ ಬಿಜೆಪಿ ಅವರಿಗೆ ನಡುಕ ಶುರುವಾಗಿದೆ ಹಣದ ಕೊರತೆ ಇದೆ ಅಂತ ಯಾರು ಅಂದ್ರು? 13 ಬಾರಿ ಬಜೆಟ್ ನೀಡಿದವರು ನಮ್ಮ ಮುಖ್ಯಮಂತ್ರಿಗಳಿದ್ದಾರೆ

ಶಾಸಕ ಬಸವರಾಜ ರಾಯರೆಡ್ಡಿ ಪತ್ರದ ವಿಚಾರವಾಗಿ ಮಾತನಾಡಿದ ಸಚಿವ ತಂಗಡಗಿರವರು ,ಬಿಜೆಪಿಯಲ್ಲಿ ಭ್ರಷ್ಟಾಚಾರ ಆಗಿತ್ತು ಅದನ್ನ ಮುಂದುವರಿಸದೆ ಆಡಳಿತ ಮಾಡುವಂತೆ ಸಲಗೆ ನೀಡಿದ್ದಾರೆ .ಡ್ರಗ್ಸ್ ದಂದೆ ನಡೆದಿರೋದು ಬಿಜೆಪಿ ಸರ್ಕಾರ ಇದ್ದಾಗ ನಾನು ಎಲ್ಲಾ ರೀತಿ ಕ್ರಮ ವಹಿಸಿದ್ದೇನೆ ಪೆನ್ಡ್ರೈವ್ ಎಲ್ಲರತ್ರ ಇದೆ, ಆದರೆ ಅದರಲ್ಲಿ ಏನು ಇಲ್ಲಾ. ಬುಟ್ಟಿಯಲ್ಲಿ ಹಾವು ಇದೆ ಅಂತಾರೆ ಆದ್ರೆ ಅದರಲ್ಲಿ ಹಾವೇ ಇರಲ್ಲ ಎನ್ನುವಂತಾಗಿದೆ ಎಂದು ಕುಮಾರಸ್ವಾಮಿಯವರ ವಿರುದ್ದ ಲೇವಡಿ ಮಾಡಿದರು.

ಬಿಜೆಪಿ ಜೆಡಿಎಸ್ ಅವರಿಗೆ ಒಂದು ಮಾತು ಹೇಳ್ತಿನಿ ಒಂದೆರಡು ವರ್ಷ ಆಡಳಿತ ಮಾಡೋಕೆ ಬಿಟ್ಟು ನೋಡಿ ನಮ್ಮ ಆಡಳಿತನಾದ್ರೂ ನೋಡ್ರಿ ವರ್ಗಾವಣೆ ಯಾವಾಗ ಆಗಿಲ್ಲ. ಕುಮಾರಸ್ವಾಮಿ ಅವರ ಕಾಲದಲ್ಲಿ ವರ್ಗಾವಣೆ ಆಗಿಲ್ವಾ? ಹರಾಜು ಪ್ರಕ್ರಿಯೆ ಆಗಿದೆ ಅಂದ್ರೆ ದಾಖಲೆ ಕೊಡಿ ಅವರು ಹೇಳೋದು ಹಿಟ್ ಅಂಡ್ ರನ್ ಅಷ್ಟೇ ಎಲ್ಲಾ ಸರ್ಕಾರದಲ್ಲೂ ವರ್ಗಾವಣೆ ಆಗುತ್ತೆ ಸಮಾಧಾನದಿಂದ ಇರ್ರಿ ಆಮೇಲೆ ನಮ್ಮ ಆಡಳಿತ ನೋಡಿ ಎಂದ ಶಿವರಾಜ್ ತಂಗಡಗಿಯವರು ಮಾದ್ಯಮಗೋಷ್ಠಿಯಲ್ಲಿ ತಿಳಿಸಿದರು.

GruhaLaxmi: ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ: ಸತೀಶ್ ಜಾರಕಿಹೊಳಿ ಅಸಮಧಾನ..!

Guest Teachers: ವಿವಿಧ ಬೇಡಿಕೆಗಳ ಈಡೇರಿಕೆಗೆ ಅತಿಥಿ ಶಿಕ್ಷಕರು ಪ್ರತಿಭಟನೆಗೆ ನಿರ್ಧಾರ..!

Forest :ಅರಣ್ಯ ಇಲಾಖೆ ಶೋಷಣೆ ವಿರುದ್ಧ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ..!

- Advertisement -

Latest Posts

Don't Miss